ಇಂದು ತಮಿಳುನಾಡು ರಾಜ್ಯ ಕ್ರಿಕೆಟ್ ಸಂಸ್ಥೆ, ಮೊದಲ ಪಂದ್ಯಕ್ಕೆ ತಂಡ ಪ್ರಕಟಗೊಳಿಸಿತು. ಅಂತರಾಷ್ಟ್ರೀಯ ಕ್ರಿಕೆಟಿಗರಾದ ಮುರುಳಿ ವಿಜಯ್ ಹಾಗೂ ಅಶ್ವಿನ್ ಉಪಸ್ಥಿತಿ ತಮಿಳು ನಾಡು ತಂಡಕ್ಕೆ ವರದಾನವಾಗಲಿದೆ ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

ಚೆನ್ನೈ(ಅ.03): ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದ ಆರ್.ಅಶ್ವಿನ್, ತಮಿಳುನಾಡು ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜತೆಗೆ ಟೆಸ್ಟ್ ತಂಡದ ಆರಂಭಿಕ ಮುರಳಿ ವಿಜಯ್ ಸಹ ಅ.6ರಿಂದ ಆರಂಭಗೊಳ್ಳಲಿರುವ ಆಂಧ್ರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ.

ಇಂದು ತಮಿಳುನಾಡು ರಾಜ್ಯ ಕ್ರಿಕೆಟ್ ಸಂಸ್ಥೆ, ಮೊದಲ ಪಂದ್ಯಕ್ಕೆ ತಂಡ ಪ್ರಕಟಗೊಳಿಸಿತು. ಅಂತರಾಷ್ಟ್ರೀಯ ಕ್ರಿಕೆಟಿಗರಾದ ಮುರುಳಿ ವಿಜಯ್ ಹಾಗೂ ಅಶ್ವಿನ್ ಉಪಸ್ಥಿತಿ ತಮಿಳು ನಾಡು ತಂಡಕ್ಕೆ ವರದಾನವಾಗಲಿದೆ ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

ತಮಿಳುನಾಡು ತಂಡವನ್ನು ಅಭಿನವ್ ಮುಕುಂದ್ ಮುನ್ನಡೆಸಲಿದ್ದಾರೆ. ಯುವ ಆಟಗಾರ ಬಾಬಾ ಇಂದ್ರಜಿತ್‌'ಗೆ ಉಪನಾಯಕತ್ವ ನೀಡಲಾಗಿದೆ.