ಹೊಟ್ಟೆ ಕಾರಣಕ್ಕೆ ಟ್ರೋಲಿಗರಿಗೆ ಆಹಾರವಾಗಿದ್ದ ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತೊಮ್ಮೆ ನಗೆಪಾಟಲಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತ ಜಯ ದಾಖಲಿಸುತ್ತಿದ್ದಂತೆ ಸಂಭ್ರಮ ಹಂಚಿಕೊಳ್ಳುವಾಗ ಶಾಸ್ತ್ರಿ ಎಡವಟ್ಟು ಮಾಡಿಕೊಂಡಿದ್ದಾರೆ.
ಅಡಿಲೇಡ್[ಡಿ.10] ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. 31 ರನ್‌ಗಳಿಂದ ಗೆದ್ದ ಭಾರತಕ್ಕೆ ಅಭಿನಂದನೆಗಳ ಮಹಾಪೂರವೆ ಹರಿದು ಬಂದಿದೆ. ಆದರೆ ಶಾಸ್ತ್ರಿ ಕಮೆಂಟ್ ಟ್ರೋಲಿಗರ ಕೈಗೆ ಸಿಕ್ಕಿದೆ.
ನನಗೆ ವಾಂತಿ ಬರುತ್ತಿದೆ ಎಂದ ರವಿಶಾಸ್ತ್ರಿ..!
ಸುನೀಲ್ ಗಾವಾಸ್ಕರ್ ಸ್ಟುಡಿಯೋದಿಂದ ಪ್ರಶ್ನೆ ಕೇಳುತ್ತಿದ್ದರು. ಈ ವೇಳೆ ಹಿಂದಿಯಲ್ಲಿ ಮಾತನಾಡಿದ ಶಾಸ್ತ್ರಿ ಅಸಂವಿಧಾನಿಕ ಪದವೊಂದನ್ನು ಬಳಸಿದರು,. ಹೇಳಿಕೆ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಗಾದರೆ ಶಾಸ್ತ್ರಿಗಳ ಬಾಯಲ್ಲಿ ಬಂದ ಮಾತು ಎಂಥದ್ದು...?
