ರವಿಶಾಸ್ತ್ರಿ, ಪ್ರಸಕ್ತ ವರ್ಷದ ಜುಲೈನಲ್ಲಿ ಭಾರತ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ 18 ಜುಲೈನಿಂದ 18 ಅಕ್ಟೋಬರ್ ಅವಧಿಯ ಸಂಭಾವನೆಯ ಹಣವನ್ನು ನೀಡಲಾಗಿದೆ ಎಂದು ಬಿಸಿಸಿಐ ತನ್ನ ವೆಬ್‌'ಸೈಟ್‌'ನಲ್ಲಿ ಪ್ರಕಟಿಸಿದೆ.

ನವದೆಹಲಿ(ಅ.05): ಭಾರತದ ಕೋಚ್ ರವಿಶಾಸ್ತ್ರಿ ಅವರಿಗೆ ಮೊದಲ 3 ತಿಂಗಳ ಅವಧಿಗೆ ₹ 1.20 ಕೋಟಿ ಹಣವನ್ನು ಸಂಭಾವನೆ ರೂಪದಲ್ಲಿ ಬಿಸಿಸಿಐ ನೀಡಿದೆ.

ರವಿಶಾಸ್ತ್ರಿ, ಪ್ರಸಕ್ತ ವರ್ಷದ ಜುಲೈನಲ್ಲಿ ಭಾರತ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ 18 ಜುಲೈನಿಂದ 18 ಅಕ್ಟೋಬರ್ ಅವಧಿಯ ಸಂಭಾವನೆಯ ಹಣವನ್ನು ನೀಡಲಾಗಿದೆ ಎಂದು ಬಿಸಿಸಿಐ ತನ್ನ ವೆಬ್‌'ಸೈಟ್‌'ನಲ್ಲಿ ಪ್ರಕಟಿಸಿದೆ.

ಹಾಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರಿಗೂ ತವರಿಂದಾಚೆ ನಡೆದಿರುವ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಸಂಭಾವನೆ ಹಣವಾದ ₹ 57.88 ಲಕ್ಷ ರುಪಾಯಿಗಳನ್ನು ನೀಡಲಾಗಿದೆ.