ಮತ್ತೊಂದು ವಿಶ್ವದಾಖಲೆ ಬರೆದ ರಶೀದ್ ಖಾನ್

First Published 25, Mar 2018, 6:08 PM IST
Rashid Khan Smashes Record Becomes Fastest to 100 ODI Wickets
Highlights

ಕೇವಲ 44 ಪಂದ್ಯದಲ್ಲಿ 100 ವಿಕೆಟ್ ಕಬಳಿಸುವ ಮೂಲಕ ರಶೀದ್ ಖಾನ್, ಇದುವರೆಗೆ ಮಿಚೆಲ್ ಸ್ಟಾರ್ಕ್(52) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು.

ಹರಾರೆ(ಮಾ.25): ಆಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಶೈಯಿ ಹೋಪ್ ವಿಕೆಟ್ ಕಬಳಿಸುವ ಮೂಲಕ ಏಕದಿನ ಕ್ರಿಕೆಟ್'ನಲ್ಲಿ ಅತಿ ವೇಗವಾಗಿ 100 ವಿಕೆಟ್ ಕಿತ್ತ ಆಟಗಾರ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕೇವಲ 44 ಪಂದ್ಯದಲ್ಲಿ 100 ವಿಕೆಟ್ ಕಬಳಿಸುವ ಮೂಲಕ ರಶೀದ್ ಖಾನ್, ಇದುವರೆಗೆ ಮಿಚೆಲ್ ಸ್ಟಾರ್ಕ್(52) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು.

ವಿಶ್ವಕಪ್ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಆಟಗಾರ ಈ ದಾಖಲೆ ಬರೆದಿದ್ದಾರೆ. 2015ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿರುವ 19 ವರ್ಷದ ರಶೀದ್ ಖಾನ್ ಆಫ್ಘಾನಿಸ್ತಾನ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಐರ್ಲೆಂಡ್ ಮಣಿಸಿದ ಆಫ್ಘಾನಿಸ್ತಾನ 2019ರ ವಿಶ್ವಕಪ್'ಗೆ ಅರ್ಹತೆಗಿಟ್ಟಿಸಿಕೊಂಡಿದೆ. ಇದೀಗ ವೆಸ್ಟ್'ಇಂಡಿಸ್ ವಿರುದ್ಧ ನಡೆಯುತ್ತಿರುವ ಪಂದ್ಯ ಕೇವಲ ಔಪಚಾರಿಕ ಪಂದ್ಯವೆನಿಸಿದೆ.

loader