ನಾಗ್ಪುರ[03]: 2018-19ನೇ ಸಾಲಿನ ರಣಜಿ ಟ್ರೋಫಿ ಚಾಂಪಿಯನ್ ಪಟ್ಟಕ್ಕಾಗಿ ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳು ಸೆಣಸುತ್ತಿದ್ದು, ಮೊದಲ ದಿನ ಉಭಯ ತಂಡಗಳಿಂದ ಸಮಬಲದ ಪ್ರದರ್ಶನ ಮೂಡಿ ಬಂದಿದೆ. ಮೊದಲ ದಿನದಂತ್ಯಕ್ಕೆ ವಿದರ್ಭ 7 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿದೆ.

ಸಂಕಷ್ಟದಲ್ಲಿದ್ದ ಮಾಜಿ ಯೋಧನಿಗೆ ನೆರವಾದ ಗಂಭೀರ್..!

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವಿದರ್ಭ ಆರಂಭದಲ್ಲೇ ಸಂಜಯ್ ರಾಮಸ್ವಾಮಿ[2] ವಿಕೆಟ್ ಕಳೆದುಕೊಂಡಿತು. ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಹಾಗೂ ನಾಯಕ ಫೈಜ್ ಫೈಜಲ್ ಆಟ ಕೇವಲ 16 ರನ್’ಗಳಿಗೆ ಸೀಮಿತವಾಯಿತು. ಅನುಭವಿ ಬ್ಯಾಟ್ಸ್’ಮನ್ ವಾಸೀಂ ಜಾಫರ್ 23, ಮೋಹಿತ್ ಕಾಳೆ 35, ಗಣೇಶ್ ಸತೀಶ್ 32 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ವಿದರ್ಭದ ಯಾವೊಬ್ಬ ಬ್ಯಾಟ್ಸ್’ಮನ್’ಗಳನ್ನು ಕ್ರೀಸ್’ನಲ್ಲಿ ಹೆಚ್ಚುಹೊತ್ತು ಬೇರೂರಲು ಜಯದೇವ್ ಉನಾದ್ಕತ್ ಪಡೆ ಬಿಡಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಅಕ್ಷಯ್ ವಾಡ್ಕರ್ 45 ಸಿಡಿಸಿ ಚೇತನ್ ಸರ್ಕಾರಿಯಾಗೆ ವಿಕೆಟ್ ಒಪ್ಪಿಸಿದರು. ಇನ್ನು ಅಕ್ಷಯ್ ಕಾರ್ನೆವರ್ 31 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಎರಡೇ ದಿನದಲ್ಲಿ ವಿರುಷ್ಕಾ ಫೋಟೋಗೆ 35 ಲಕ್ಷ ಲೈಕ್!

ಸೌರಾಷ್ಟ್ರ ಪರ ನಾಯಕ ಉನಾದ್ಕತ್ 2 ವಿಕೆಟ್ ಪಡೆದರೆ, ಚೇತನ್ ಸರ್ಕಾರಿಯಾ, ಪ್ರೇರಕ್ ಮಂಕಡ್, ಧರ್ಮೇಂದ್ರ ಸಿಂಗ್ ಜಡೇಜಾ ಹಾಗೂ ಕಮ್ಲೇಶ್ ಮಕ್ವಾನ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ವಿದರ್ಭ: 200/7
ಅಕ್ಷಯ್ ವಾಡ್ಕರ್: 45
ಉನಾದ್ಕತ್: 26/2

[* ಮೊದಲ ದಿನದಂತ್ಯಕ್ಕೆ]