ನವದೆಹಲಿ(ಫೆ.03): ರಾಷ್ಟ್ರೀಯತೆ ಹಾಗೂ ಸೇನೆ ಕುರಿತು ಅಪಾರ ಗೌರವ ಹೊಂದಿರುವ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಮಾಜಿ ಯೋಧನ ಮನವಿಯನ್ನ ರಕ್ಷಣಾ ಇಲಾಖೆಗೆ ಮುಟ್ಟಿಸೋ ಮೂಲಕ ಗೌತಮ್ ಗಂಭೀರ್ ಯೋಧನಿಗೆ ನೆರವಾಗಿದ್ದಾರೆ.

ದೆಹಲಿಯ ಕೊನಾಹ್ಸ್ ಪ್ರದೇಶದಲ್ಲಿ ಭತ್ಯೆ ಹಾಗೂ ಇತರ ಸೌಲಭ್ಯಗಳು ಸಿಗದೇ ಬಿಕ್ಷೆಗೆ ಬೇಡುವ ಪರಿಸ್ಥಿತಿಗೆ ಬಂದಿದ್ದರು. ಈ ಕುರಿತು ಫೋಟೋವನ್ನ ಟ್ವಿಟರ್ ಮೂಲಕ ಪೋಸ್ಟ್ ಮಾಡಿದ ಗಂಭೀರ್, ರಕ್ಷಣ ಇಲಾಖೆ ತಕ್ಷಣವೇ ಸಮಸ್ಯೆಗೆ ಪರಿಹಾರ ಹುಡುಕುವಂತೆ ಸೂಚಿಸಿದ್ದರು. 

 

 

ಪೀತಾಂಬರ್ ಹೆಸರಿನ ಮಾಜಿ ಯೋಧ, 1965 ಹಾಗೂ 1971ರಲ್ಲಿ ಭಾರತೀಯ ಸೇನೆಯನ್ನ ಪ್ರತಿನಿಧಿಸಿದ್ದರು.ಲ ತಾಂತ್ರಿಕ ಕಾರಣಗಳಿಂದ  ಪೀತಾಂಬರ್ ಅವರಿಗೆ ಸೇನೆಯಿಂದ ಸೂಕ್ತ ಬೆಂಬಲ ಸಿಕ್ಕಿಲ್ಲ ಎಂದು ಗೌತಮ್ ಗಂಭೀರ್ ಟ್ವೀಟ್ ಮಾಡಿದ್ದರು. ಗಂಭೀರ್ ಟ್ವೀಟ್‌ಗೆ ರಕ್ಷಣಾ ಇಲಾಖೆ ತಕ್ಷಣವೇ ಸ್ಪಂದಿಸಿದೆ.

ಮಾಜಿ ಯೋಧನ ಕುರಿತು ಬೆಳಕು ಚೆಲ್ಲಿರುವುದಕ್ಕೆ ಧನ್ಯವಾದ. ರಕ್ಷಣಾ ಇಲಾಖೆ ಪೀತಾಂಬರ್ ಅವರನ್ನ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದೆ. ಇದೀಗ ಗಂಭೀರ್ ಮಾಡಿದ ಟ್ವೀಟ್ ವೈರಲ್ ಆಗಿದ್ದು,  ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.