ಬೆಂಗಳೂರು[ಜ.19]: ಜ.26ರಿಂದ ಆರಂಭಗೊಳ್ಳಲಿರುವ ಸ್ಪೇನ್‌ ಪ್ರವಾಸಕ್ಕೆ 18 ಸದಸ್ಯೆಯರ ಭಾರತ ಮಹಿಳಾ ಹಾಕಿ ತಂಡ ಪ್ರಕಟಗೊಂಡಿದೆ. ತಂಡ ಸ್ಪೇನ್‌ ವಿರುದ್ಧ 4, ಐರ್ಲೆಂಡ್‌ ವಿರುದ್ಧ 2 ಪಂದ್ಯಗಳನ್ನು ಆಡಲಿದೆ. 

ರಾಣಿ ರಾಂಪಾಲ್‌ ನಾಯಕಿಯಾಗಿ ಮುಂದುವರಿಯಲಿದ್ದು, ಸವಿತಾ ಪೂನಿಯಾರನ್ನು ಉಪನಾಯಕಿ ಆಗಿ ನೇಮಿಸಲಾಗಿದೆ.

ವನಿತೆಯರ ತಂಡವು ಜನವರಿ 24ರಂದು ಸ್ಪೇನ್ ಪ್ರವಾಸ ಕೈಗೊಳ್ಳಲಿದ್ದು, ಕಳೆದೆರಡು ವಾರದಿಂದ ಬೆಂಗಳೂರಿನಲ್ಲಿ ತರಬೇತಿ ಶಿಬಿರಲ್ಲಿ ಪಾಲ್ಗೊಂಡಿದ್ದ ರಾಣಿ ಪಡೆ ಆತ್ಮವಿಶ್ವಾದಿಂದ ವಿದೇಶಿ ಪ್ರವಾಸ ಕೈಗೊಳ್ಳಲಿದೆ. 

ತಂಡ: 

ಗೋಲ್‌ಕೀಪರ್ಸ್: ಸವಿತಾ, ರಜನಿ . 
ಡಿಫೆಂಡ​ರ್ಸ್: ರೀನಾ ಖೋಖರ್‌, ದೀಪ್‌ ಗ್ರೇಸ್‌, ಸಲಿಮಾ ತೆತೆ, ನಿಕ್ಕಿ ಪ್ರಧಾನ್‌, ಗುರ್ಜಿತ್‌ ಕೌರ್‌, ಸುಶೀಲಾ ಚಾನು. 
ಮಿಡ್‌ಫೀಲ್ಡ​ರ್ಸ್: ಲಿಲಿಮಾ ಮಿಂಜ್‌, ಕರಿಷ್ಮಾ, ಸೋನಿಕಾ, ನೇಹಾ ಗೋಯಲ್‌. 
ಫಾರ್ವರ್ಡ್ಸ್: ರಾಣಿ, ವಂದನಾ ಕಟಾರಿಯಾ, ನವನೀತ್‌, ಲಲ್ರೆಮ್ಸಿಯಾಮಿ, ಉದಿತಾ, ನವ್ಜೋತ್‌.