ಪಂದ್ಯಾವಳಿಯಲ್ಲಿ ಗೆಲ್ಲುವ ತಂಡಕ್ಕೆ 2018ರ ವಿಶ್ವಕಪ್‌'ಗೆ ನೇರ ಅರ್ಹತೆ ಸಿಗಲಿದೆ.

ನವದೆಹಲಿ(ಅ.17): ಇದೇ ತಿಂಗಳು 28ರಿಂದ ಜಪಾನ್‌'ನ ಕಾಕಮಿಗಹಾರದಲ್ಲಿ ನಡೆಯಲಿರುವ ಏಷ್ಯಾಕಪ್ ಮಹಿಳಾ ಹಾಕಿ ಪಂದ್ಯಾವಳಿಗೆ ಭಾರತ ತಂಡ ಪ್ರಕಟಗೊಂಡಿದ್ದು, ರಾಣಿ ರಾಂಪಾಲ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.ಹಿರಿಯ ಗೋಲ್ ಕೀಪರ್ ಸವಿತಾ ಉಪನಾಯಕಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುರೋಪ್ ಪ್ರವಾಸ ಕೈಗೊಂಡಿದ್ದ ತಂಡದಲ್ಲಿ 5 ಬದಲಾವಣೆ ಮಾಡಲಾಗಿದ್ದು, ಅನುಭವಿ ಡಿಫೆಂಡರ್ ಸುಶಿಲಾ ಚಾನು ತಂಡಕ್ಕೆ ಮರಳಿದ್ದಾರೆ. ಪಂದ್ಯಾವಳಿಯಲ್ಲಿ ಗೆಲ್ಲುವ ತಂಡಕ್ಕೆ 2018ರ ವಿಶ್ವಕಪ್‌'ಗೆ ನೇರ ಅರ್ಹತೆ ಸಿಗಲಿದೆ.

ತಂಡ: ಸವಿತಾ, ರಜನಿ, ದೀಪ್ ಗ್ರೇಸ್, ಸುನಿತಾ, ಸುಶೀಲಾ, ಸುಮನ್, ಗುರ್ಜಿತ್, ನಿಕ್ಕಿ,ನಮಿತಾ,ಮೋನಿಕಾ,ಲಿಲಿಮಾ,ನೇಹಾ,ರಾಣಿ, ವಂದನಾ,ಸೋನಿಕಾ, ನವ್‌ನೀತ್,ನವ್ಜೋತ್.