ಬೆಂಗಳೂರು(ಜ.22): ಜ.24ರಿಂದ ಸೌರಾಷ್ಟ್ರ ವಿರುದ್ಧ ನಡೆಯಲಿರುವ 2018-19ರ ರಣಜಿ ಟ್ರೋಫಿ ಸೆಮಿಫೈನಲ್‌ಗೆ ಸೋಮವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಟೀಂ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್’ವಾಲ್ ತಂಡ ಕೂಡಿಕೊಂಡಿದ್ದಾರೆ. 

ಮಯಾಂಕ್ ಅಗರ್’ವಾಲ್ ಜತೆ 10 ಮಾತು ನೂರು ದನಿ..!

ಆಸ್ಪ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ 2 ಅರ್ಧಶತಕ ಸಿಡಿಸುವ ಮೂಲಕ ಆಕರ್ಷಕ ಪ್ರದರ್ಶನ ತೋರಿದ್ದ ಮಯಾಂಕ್‌ ಅಗರ್‌ವಾಲ್‌ ಇದೀಗ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಪರ ಕಣಕ್ಕಿಳಿಯಲಿದ್ದಾರೆ. ಆಲ್ರೌಂಡರ್ ಪವನ್ ದೇಶ್’ಪಾಂಡೆ ಅವರನ್ನು ಕೈಬಿಟ್ಟು ಮಯಾಂಕ್ ಅವರಿಗೆ ಅವಕಾಶ ಕಲ್ಪಿಸಲಲಾಗಿದೆ. ಕ್ವಾರ್ಟರ್’ಫೈನಲ್ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು 6 ವಿಕೆಟ್’ಗಳಿಂದ ಮಣಿಸಿದ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿತ್ತು.

ತಂಡ: ಮನೀಶ್‌ ಪಾಂಡೆ (ನಾಯಕ), ಶ್ರೇಯಸ್‌ ಗೋಪಾಲ್‌, ಮಯಾಂಕ್‌ ಅಗರ್‌ವಾಲ್‌, ಆರ್‌.ಸಮರ್ಥ್, ಡಿ.ನಿಶ್ಚಲ್‌, ಕರುಣ್‌ ನಾಯರ್‌, ಕೆ.ವಿ.ಸಿದ್ಧಾರ್ಥ್, ವಿನಯ್‌ ಕುಮಾರ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಬಿ.ಆರ್‌.ಶರತ್‌, ಶರತ್‌ ಶ್ರೀನಿವಾಸ್‌, ಜೆ.ಸುಚಿತ್‌,ಪ್ರಸಿದ್ಧ್ ಕೃಷ್ಣ.