ಈ ಪಂದ್ಯದ ಮೂಲಕ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಆರ್‌ಎಸ್ ವ್ಯವಸ್ಥೆಯನ್ನು ಅಳವಡಿಸುತ್ತಿರುವುದಾಗಿದೆ.

ನವದೆಹಲಿ(ನ.05): ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ತೀರ್ಮಾನವನ್ನು ಪರಿಶೀಲನೆ(ಡಿಆರ್‌ಎಸ್) ಕ್ರಮಕ್ಕೆ ಚಾಲನೆ ದೊರಕಲಿದೆ.

ಈ ಪಂದ್ಯದ ಮೂಲಕ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಆರ್‌ಎಸ್ ವ್ಯವಸ್ಥೆಯನ್ನು ಅಳವಡಿಸುತ್ತಿರುವುದಾಗಿದೆ. ಪ್ರಯೋಗದ ಆಧಾರದಲ್ಲಿ ಈ ವ್ಯವಸ್ಥೆ ಜಾರಿಗೆ ಬರವುದಕ್ಕೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಗೌರವ ಕಾರ್ಯದರ್ಶಿ ನಿರಂಜನ್ ಶಾ ಪ್ರಮುಖರಾಗಿದ್ದಾರೆ.

ಬಿಸಿಸಿಐ ಆರಂಭದಿಂದಲೂ ಡಿಆರ್‌ಎಸ್ ವ್ಯವಸ್ಥೆಯನ್ನು ವಿರೋದಿಸಿದೆ. ಪ್ರಯೋಗಾರ್ತಕವಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಡಿಆರ್‌ಎಸ್ ಅಳವಡಿಕೆಗೆ ಬಿಸಿಸಿಐ ಮನಸ್ಸು ಮಾಡಿದೆ.