ಯುಪಿಸಿಎ ಕಾರ್ಯದರ್ಶಿಯಾಗಿ ಒಂಬತ್ತು ವರ್ಷಗಳನ್ನು ಶುಕ್ಲಾ ಪೂರೈಸಿದ್ದರೆ, ಮಿಕ್ಕವರೆಲ್ಲಾ 70ರ ವಯೋಮಿತಿ ಮೀರಿದ್ದಾರೆ.

ಕಾನ್ಪುರ(ಜ.26): ನ್ಯಾ. ಲೋಧಾ ಸಮಿತಿ ಶಿಫಾರಸಿನ ಪ್ರಭಾವದಿಂದಾಗಿ ಹಿರಿಯ ಕ್ರಿಕೆಟ್ ಆಡಳಿತಾಧಿಕಾರಿ ರಾಜೀವ್ ಶುಕ್ಲಾ ಸೇರಿದಂತೆ ಉ.ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ಯುಪಿಸಿಎ ಉಪಾಧ್ಯಕ್ಷರುಗಳಾದ ತಾಹಿರ್ ಹಸನ್, ಮದನ್ ಮೋಹನ್ ಮಿಶ್ರಾ, ಲೆಕ್ಕ ವಿಭಾಗದ ಜಂಟಿ ಕಾರ್ಯದರ್ಶಿ ಬಿ.ಸಿ. ಜೈನ್ ಮತ್ತು ಖಜಾಂಚಿ ಕೆ.ಎನ್. ಟಂಡನ್ ಹಾಗೂ ಕಿರಿಯ ಕಾರ್ಯದರ್ಶಿ ಸುಹೇಬ್ ಅಹಮದ್ ತಮ್ಮ ಹುದ್ದೆಗಳನ್ನು ತೊರೆದಿದ್ದಾರೆ.

ಯುಪಿಸಿಎ ಕಾರ್ಯದರ್ಶಿಯಾಗಿ ಒಂಬತ್ತು ವರ್ಷಗಳನ್ನು ಶುಕ್ಲಾ ಪೂರೈಸಿದ್ದರೆ, ಮಿಕ್ಕವರೆಲ್ಲಾ 70ರ ವಯೋಮಿತಿ ಮೀರಿದ್ದಾರೆ. ಹೀಗಾಗಿ ಶಿಫಾರಸಿನ ಮೇರೆಗೆ ಇವರಾರೂ ಅಧಿಕಾರದಲ್ಲಿ ಮುಂದುವರೆಯುವಂತಿಲ್ಲ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಂದಿನ ವಿಶೇಷ ಮಹಾಸಭೆಯವರೆಗೂ ಜಂಟಿ ಕಾರ್ಯದರ್ಶಿ ಯದುವಿರ್ ಸಿಂಗ್ ಹೆಚ್ಚುವರಿ ಕಾರ್ಯದರ್ಶಿಯಾಗಿ ಶುಕ್ಲಾ ಅವರ ಸ್ಥಾನಕ್ಕೆ ಆಯ್ಕೆಯಾದರೆ, ಉಪಾಧ್ಯಕ್ಷ ರಿಯಾಸತ್ ಅಲಿ ಹೆಚ್ಚುವರಿ ಖಜಾಂಚಿಯಾಗಿ ಅಧಿಕಾರ ವಹಿಸಿಕೊಂಡರು.