ಬೆಂಗಳೂರು(ಏ.30):ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಮುಖಮುಖಿಯಾಗುತ್ತಿದೆ. ಇನ್ನುಳಿದ 2 ಪಂದ್ಯ ಗೆಲ್ಲುವುದೇ ಈ ತಂಡಗಳ ಗುರಿ. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ  ರಾಜಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

 

ಇದನ್ನೂ ಓದಿ: ನಿರಾಸೆ ಬೇಡ; RCB ಅಭಿಮಾನಿಗಳಿಗಿದು ಗುಡ್ ನ್ಯೂಸ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 12 ಪಂದ್ಯದಲ್ಲಿ 4 ಗೆಲುವು ಸಾಧಿಸಿದೆ. ಇನ್ನುಳಿದ 8 ಪಂದ್ಯಗಳನ್ನು ಸೋತು 8ನೇ ಸ್ಥಾನದಲ್ಲಿದೆ. ಇನ್ನು ರಾಜಸ್ಥಾನ ಹೋರಾಟ ಇದಕ್ಕಿಂತ ಭಿನ್ನವಾಗಿಲ್ಲ. ಆಡಿದ 12ರಲ್ಲಿ 5 ಗೆಲುವು ಸಾಧಿಸೋ ಮೂಲಕ 7ನೇ ಸ್ಥಾನದಲ್ಲಿದೆ.