ನಿರಾಸೆ ಬೇಡ; RCB ಅಭಿಮಾನಿಗಳಿಗಿದು ಗುಡ್ ನ್ಯೂಸ್!
ಡೆಲ್ಲಿ ವಿರುದ್ಧ ಸೋಲು ಅನುಭವಿಸೋ ಮೂಲಕ RCB ಸೋಲಿನ ಸಂಖ್ಯೆ 8ಕ್ಕೇರಿದೆ. ಇನ್ನುಳಿದ 2 ಪಂದ್ಯ ಗೆದ್ದರೆ 12 ಅಂಕ ಸಂಪಾದಿಸಲಿದೆ. 12 ಅಂಕದೊಂದಿಗೆ ಪ್ಲೇ ಆಫ್ ಸ್ಥಾನಕ್ಕೇರಲು ಬೆಂಗಳೂರು ತಂಡಕ್ಕೆ ಅವಕಾಶವಿದೆ. ಹಾಗಾದರೆ RCB ಪ್ಲೇ ಆಫ್ ಕನಸು ನನಸಾಗುತ್ತಾ? ಇಲ್ಲಿದೆ ವಿವರ.
ದೆಹಲಿ(ಏ.29): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದೃಷ್ಟ ನೆಟ್ಟಗಿಲ್ಲ. ಹೀಗಾಗಿ ಆಡಿದ 12 ಪಂದ್ಯದಲ್ಲಿ 4 ಗೆಲುವು ಮಾತ್ರ ಸಾಧಿಸಿದೆ. ಆರಂಭದಲ್ಲಿ ಸತತ ಸೋಲು ಅನುಭವಿಸಿದ್ದ RCB, ಬಳಿಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಭರ್ಜರಿ ಕಮ್‌ಬ್ಯಾಕ್ ಮಾಡಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಗ್ಗರಿಸೋ ಮೂಲಕ ನಿರಾಸೆ ಅನುಭವಿಸಿತು. ಡೆಲ್ಲಿ ವಿರುದ್ಧ ಸೋಲು ಕಾಣುತ್ತಿದ್ದಂತೆ RCB ಟೂರ್ನಿಯಿಂದಲೇ ಹೊರಬಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ 8 ಸೋಲು ಅನುಭವಿಸಿದರೂ RCB ಪ್ಲೇ ಆಫ್ ಅವಕಾಶ ಇನ್ನೂ ಜೀವಂತವಾಗಿದೆ.
ಇದನ್ನೂ ಓದಿ: IPL 2019: ಪ್ಲೇ ಆಫ್ ಹಾಗೂ ಫೈನಲ್ ಪಂದ್ಯದ ಸಮಯ ಬದಲಾವಣೆ!
ಪ್ಲೇ ಆಫ್ ಹಂತಕ್ಕೇರಲು RCB ಸಣ್ಣ ಅವಕಾಶವೊಂದಿದೆ. ಸದ್ಯ 8 ಅಂಕ ಸಂಪಾದಿಸಿರುವ RCBಗೆ ಇನ್ನು 2 ಪಂದ್ಯಗಳು ಬಾಕಿ ಇವೆ. ಎರಡರಲ್ಲೂ ಗೆಲುವು ಸಾಧಿಸಿದರೆ RCB 12 ಅಂಕ ಸಂಪಾದಿಸಲಿದೆ. ಇನ್ನೂ ಇತರ ತಂಡದ ರಿಸಲ್ಟ್ ಕೂಡ RCB ಪ್ಲೇ ಆಫ್ ಸ್ಥಾನಕ್ಕೇರಲು ಪ್ರಮುಖವಾಗಿದೆ.
ಇದನ್ನೂ ಓದಿ: ಗಾಯದ ಮೇಲೆ ಬರೆ ಎಳೆದಂತಾದ ರೋಹಿತ್ ಶರ್ಮಾ ಸ್ಥಿತಿ!
RCB ಪ್ಲೇ ಆಫ್ ಅವಕಾಶ ಹೇಗೆ?
ಪಂದ್ಯ 49: RCB Vs RR= RCB ಭಾರಿ ಅಂತರದ ಗೆಲುವು ಸಾಧಿಸಬೇಕು(RCB ಅಂಕ: 10)
ಪಂದ್ಯ 50: CSK VS DC= ಈ ಫಲಿತಾಂಶ RCBಗೆ ಮುಖ್ಯವಲ್ಲ
ಪಂದ್ಯ 51: MI vs SRH= ಮುಂಬೈ ಭಾರಿ ಅಂತರದಲ್ಲಿ ಗೆಲ್ಲಬೇಕು(MI ಅಂಕ: 16)
ಪಂದ್ಯ 52: KXIP Vs KKR= KKR ಸಾಧಾರಣ ಅಂತರಲ್ಲಿ ಗೆಲ್ಲಬೇಕು(KKR ಅಂಕ: 12)
ಪಂದ್ಯ 53: DC Vs RR= ಡೆಲ್ಲಿ ಭಾರಿ ಅಂತರದಲ್ಲಿ ಗೆಲುವು ಸಾಧಿಸಬೇಕು(DC ಅಂಕ: 18 ಅಥವಾ 20)
ಪಂದ್ಯ 54: RCB Vs SRH= ಬೆಂಗಳೂರು ಭಾರಿ ಅಂತರದಲ್ಲಿ ಗೆಲುವು ಸಾಧಿಸಬೇಕು(RCB ಅಂಕ: 12)
ಪಂದ್ಯ 55 : KXIP Vs CSK= ಚೆನ್ನೈ ಭಾರಿ ಅಂತರದಲ್ಲಿ ಗೆಲ್ಲಬೇಕು(CSK ಅಂಕ: 18 ಅಥವಾ 20)
ಪಂದ್ಯ 56: MI Vs KKR:ಮುಂಬೈ ಭಾರಿ ಅಂತರದಲ್ಲಿ ಗೆಲ್ಲಬೇಕು(MI ಅಂಕ: 18)
ಪಂದ್ಯದ ಫಲಿತಾಂಶ ಇದೇ ರೀತಿ ಆದಲ್ಲಿ, RCB 12 ಅಂಕದ ಜೊತೆಗೆ, ರನ್‌ರೇಟ್ ಕೂಡ ಉತ್ತಮವಾಗಲಿದೆ. ಈ ಮೂಲಕ ಪ್ಲೇ ಆಫ್ ಪ್ರವೇಶಿಸಲಿದೆ. ಅಂಕಿ ಅಂಶಗಳಲ್ಲಿ RCBಗೆ ಇನ್ನೂ ಪ್ಲೇ ಆಫ್ ಅವಕಾಶವಿದೆ. ಆದರೆ ಈ ಮ್ಯಾಜಿಕ್ ಸಾಧ್ಯವೇ ಅನ್ನೋದು ಯಕ್ಷ ಪ್ರಶ್ನೆ.