ಐಪಿಎಲ್ 2019ರಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ನಾಯಕ ಅಜಿಂಕ್ಯ ರಹಾನೆಗೆ ತೀವ್ರ ಹಿನ್ನಡೆಯಾಗಿದೆ. ಒಂದೆಡೆ ಸತತ ಸೋಲಿನಿಂದ ಕಂಗೆಟ್ಟಿರುವ ರಹಾನೆಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.

ಚೆನ್ನೈ(ಏ.01): 12ನೇ ಆವೃತ್ತಿ ಐಪಿಎಲ್ ಟೂರ್ನಿ ರಾಜಸ್ಥಾನ ರಾಯಲ್ಸ್ ನಾಯಕ ಅಜಿಂಕ್ಯ ರಹಾನೆಗೆ ನಿರೀಕ್ಷಿತ ಆರಂಭ ನೀಡಿಲ್ಲ. ಆಡಿದ 3 ಪಂದ್ಯಗಳನ್ನ ಸೋತಿರುವ ರಾಜಸ್ಥಾನ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಸೋಲು ಅನುಭವಿಸಿ ನಿರಾಸೆ ಅನುಭವಿಸಿತು. ಈ ಸೋಲಿನ ಬೆನ್ನಲ್ಲೇ ಅಜಿಂಕ್ಯ ರಹಾನೆಗೆ ಮತ್ತೊಂದು ಆಘಾತ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: IPL 2019: ರಾಜಸ್ಥಾನ ವಿರುದ್ಧ CSKಗೆ 8 ರನ್ ರೋಚಕ ಗೆಲುವು!

CSK ವಿರುದ್ದದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕೆ ರಾಜಸ್ಥಾನ ನಾಯಕ ರಹಾನೆಗೆ ದಂಡ ವಿಧಿಸಲಾಗಿದೆ. ಪಂದ್ಯದ ಸಂಭಾವನೆಯನ್ನು ದಂಡದ ರೂಪದಲ್ಲಿ ರಹಾನೆ ಪಾವತಿಸಬೇಕಿದೆ. ರಹಾನೆ ಇದೀಗ 12 ಲಕ್ಷ ರೂಪಾಯಿ ಹಣವನ್ನು ದಂಡವಾಗಿ ಪಾವತಿಸಬೇಕಿದೆ. 

ಇದನ್ನೂ ಓದಿ: RCB ಹೀನಾಯ ಸೋಲಿನ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು..?

ರಹಾನೆಗೂ ಮುನ್ನ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಸ್ಲೋ ಓವರ್ ರೇಟ್‌ಗೆ ದಂಡ ವಿದಿಸಲಾಗಿದೆ. 12ನೇ ಆವೃತ್ತಿಯಲ್ಲಿ ನಿದಾನಗತಿಯ ಓವರ್ ರೇಟ್‌ಗೆ ದಂಡ ವಿದಿಸಿದ 2ನೇ ನಾಯಕ ಅನ್ನೋ ಅಪಖ್ಯಾತಿಗೆ ಪಾತ್ರರಾಗಿದ್ದಾರೆ. ಚೆನ್ನೈ ವಿರುದ್ಧ ರಾಜಸ್ಥಾನ ರಾಯಲ್ಸ್ ಕೇವಲ 8 ರನ್‌ಗಳ ವಿರೋಚಿತ ಸೋಲು ಅನುಭವಿಸಿತ್ತು.