ರಾಹುಲ್ ದ್ರಾವಿಡ್ ಗೆ 20 ವರ್ಷದ ಯುವತಿ ಪ್ರಪೋಸ್ ಮಾಡಿದಾಗ...!

ಟೀಂ ಇಂಡಿಯಾದ 'ವಾಲ್' ಎಂದೇ ಪ್ರಖ್ಯಾತರಾಗಿರುವ ರಾಹುಲ್ ದ್ರಾವಿಡ್‌ರವರ ವಿಡಿಯೋ ಒಂದು ವೈರಲ್ ಅಗುತ್ತಿದೆ. 20 ವರ್ಷದ ಯುವತಿಯೊಬ್ಬಳು ಪ್ರಪೋಸ್ ಮಾಡಿದಾಗ ಅವರು ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Rahul Dravid s old Bakra video trends

ಟೀಂ ಇಂಡಿಯಾದ 'ವಾಲ್' ಹೆಸರಿನಿಂದಲೇ ಪ್ರಖ್ಯಾತರಾಗಿರುವ ರಾಹುಲ್ ದ್ರಾವಿಡ್ 46 ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1973ರ ಜನವರಿ 11ರಂದು ಜನಿಸಿದ ದ್ರಾವಿಡ್ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ದಿಗ್ಗಜ ನಾಯಕರು. ಇವರ ನಾಯಕತ್ವದಲ್ಲಿ ಆಡಿದ ಹಲವಾರು ಪಂದ್ಯಗಳಲ್ಲಿ ಭಾರತವು ಗೆಲುವನ್ನು ತಮ್ಮದಾಗಿಸಿಕೊಂಡಿದೆ. ಇವರನ್ನು ಟೀಂ ಇಂಡಿಯಾದ 'ರಿಯಲ್ ಜಂಟಲ್ ಮ್ಯಾನ್' ಎನ್ನಲಾಗುತ್ತದೆ. ಅಂತಾರಾಷ್ಟ್ರೀಯ ಪಂದ್ಯದಿಂದ ನಿವೃತ್ತಿ ಪಡೆದಿರುವ ದ್ರಾವಿಡ್ ಸದ್ಯ ಟೀಂ ಇಂಡಿಯಾದ ಅಂಡರ್-19 ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಜನ್ಮ ದಿನದ ಸಂದರ್ಭದಲ್ಲಿ ಅವರ ಹಳೆ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ತನ್ನನ್ನು ಪ್ರಪೋಸ್ ಮಾಡಿದ ಹುಡುಗಿಗೆ ದ್ರಾವಿಡ್ ನೀಡುವ ಪ್ರತಿಕ್ರಿಯೆ ವೀಕ್ಷಕರನ್ನು ನಗೆಗಡಲ್ಲಿ ತೇಲಿಸಿದೆ. ಈ ಮೊದಲು 'MTV ಬಕ್ರಾ' ಎಂಬ ಪ್ರಖ್ಯಾತ ಶೋ ಪ್ರಸಾರವಾಗುತ್ತಿದ್ದು, ಇದೇ ತಂಡ ದ್ರಾವಿಡ್ ರವರ ಪ್ರ್ಯಾಂಕ್ ವಿಡಿಯೋ ಮಾಡಿತ್ತು. ಸಂದರ್ಶನ ಮಾಡುತ್ತಿದ್ದ 20 ವರ್ಷದ ಯುವತಿ, ಬಳಿಕ ವರನ್ನು ಪ್ರಪೋಸ್ ಮಾಡಿದ್ದರು. ಯುವತಿಯ ವರ್ತನೆಯಿಂದ ಸಿಟ್ಟಾದ ರಾಹುಲ್ ಮೊದಲು ಆಕೆಗೆ ಬೈಯ್ದಿದ್ದಾರೆ ಹಾಗೂ ಓದಿನ ಕಡೆ ಗಮನ ನೀಡುವಂತೆ ಸೂಚಿಸಿದ್ದಾರೆ.

ಇತ್ತೀಚೆಗಷ್ಟೇ ಕಾಫಿ with ಕರಣ್ ಎಂಬ ಟಿವಿ ಶೋನಲ್ಲಿ ಭಾಗವಹಿಸಿದ್ದ ಹಾರ್ದಿಕ್ ಪಾಂಡ್ಯಾ ಮಹಿಳೆಯರ ಕುರಿತಾಗಿ ಕೆಟ್ಟ ಮಾತುಗಳನ್ನಾಡಿದ್ದರು. ಈ ಹಿನ್ನೆಲೆಯಲ್ಲೂ ಈ ವಿಡಿಯೋ ಶೇರ್ ಮಾಡಲಾಗುತ್ತಿದೆ. ಈ ಮೂಲಕ ಪಾಂಡ್ಯಾರಿಗೆ 'ಜಂಟಲ್ ಮ್ಯಾನ್' ಎಂದರೆ ದ್ರಾವಿಡ್ ರಂತೆ ಇರಬೇಕು ಎಂದು ತಿಳಿಸುತ್ತಿದ್ದಾರೆ.

ದ್ರಾವಿಡ್ ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದಲ್ಲಿ 164ಟೆಸ್ಟ್, 344 ಏಕದಿನ ಹಾಗೂ 1 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 36 ಸೆಂಚುರಿಗಳ ಸಹಾಯದೊಂದಿಗೆ 13288 ರನ್ ಸಿಡಿಸಿದ್ದಾರೆ. ಏಕದಿನ ಪಂದ್ಯದಲ್ಲಿ 12 ಶತಗಳೊಂದಿಗೆ 10889 ರನ್ ಹಾಗೂ ತಮ್ಮ ಜೀವನದ ಏಕೈಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 31 ರನ್ ಸಿಡಿಸಿದ್ದಾರೆ. ಸಾಲದೆಂಬಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಇವರು ತಮ್ಮ ಹಾಫ್ ಸ್ಪಿನ್ ಬೌಲಿಂಗ್ ಮಾಡಿ ಶೈನ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ ಹಾಘೂ ಏಕದಿನ ಪಂದ್ಯಗಳಲ್ಲಿ ಒಟ್ಟು 4 ವಿಕೆಟ್ ಕಬಳಿಸಿದ್ದಾರೆ.

Latest Videos
Follow Us:
Download App:
  • android
  • ios