ಕನ್ನಡಿಗನೆ ಮುರಿದ ದಾಖಲೆ

ಕೆ.ಎಲ್.ರಾಹುಲ್ ಆಕರ್ಷಕ 57 ರನ್ ಗಳಿಸುವ ಮೂಲಕ ಸತತ ಆರು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಭಾರತದ 3ನೇ ಆಟಗಾರ ಎನ್ನುವ ದಾಖಲೆ ಬರೆದರು. ಈ ಮೊದಲು ಜಿ.ಆರ್.ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. ವಿಶೇಷ ಎಂದರೆ ಮೂವರೂ ಕರ್ನಾಟಕದವರು. ಸತತವಾಗಿ ಅತಿಹೆಚ್ಚು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ, ಆಸ್ಟ್ರೇಲಿಯಾದ ಕ್ರಿಸ್ ರೋಜರ್ಸ್‌(07) ಹೆಸರಿನಲ್ಲಿದೆ.