ಹೈದರಾಬಾದಿನ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು, ದೇಶದ ಕ್ರೀಡಾ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿಯನ್ನೂ ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.
ನವದೆಹಲಿ(ಡಿ.03): ರಿಯೊ ಕೂಟದಲ್ಲಿ ದೇಶಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟ ಪಿ.ವಿ. ಸಿಂಧು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸರ್ಚ್ ಇಂಜಿನ್ ಯಾಹೂ ಪ್ರಕಾರ ಅಂತರ್ಜಾಲದಲ್ಲಿ ಪ್ರಸಕ್ತ ವರ್ಷ 2016ರಲ್ಲಿ ಅತಿಹೆಚ್ಚು ಹುಡುಕಾಟಗೊಳಪಟ್ಟ ಕ್ರೀಡಾಪಟು ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಹೈದರಾಬಾದಿನ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು, ದೇಶದ ಕ್ರೀಡಾ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿಯನ್ನೂ ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ.
ಸಿಂಧು ನಂತರ ಎರಡನೇ ಸ್ಥಾನವನ್ನು ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಪಡೆದುಕೊಂಡಿದ್ದಾರೆ. ರಿಯೊ ಕೂಟದಲ್ಲಿ ಫೈನಲ್ ತಲುಪುವ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ದೀಪಾ ಬಗ್ಗೆ ಕೂಡ ಅತಿ ಹೆಚ್ಚು ಜನ ಹುಡುಕಾಟ ನಡೆಸಿದ್ದಾರೆ.
ದೀಪಾ ನಂತರ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಇಂಟರ್'ನೆಟ್'ನಲ್ಲಿ ಹುಡುಕಾಡಿದರೆ, ನಾಲ್ಕನೇ ಸ್ಥಾನದಲ್ಲಿ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಇದ್ದಾರೆ.