ನವದೆಹಲಿ[ಏ.22]: 12ನೇ ಆವೃತ್ತಿ ಐಪಿಎಲ್‌ನಲ್ಲಿ ನಿಧಾನಗತಿ ಬೌಲಿಂಗ್‌ ಘಟನೆಗಳು ಹೆಚ್ಚುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ನಿಧಾನಗತಿ ಬೌಲಿಂಗ್‌ ಮಾಡಿದ ಕಾರಣ, ನಾಯಕ ಆರ್‌.ಅಶ್ವಿನ್‌ಗೆ 12 ಲಕ್ಷ ದಂಡ ವಿಧಿಸಲಾಗಿದೆ. 

ಐಪಿಎಲ್ ಬ್ರೇಕ್ ಬಗ್ಗೆ ತುಟಿಬಿಚ್ಚಿದ ಎಬಿಡಿ..

ಈ ಆವೃತ್ತಿಯಲ್ಲಿ ದಂಡ ಹಾಕಿಸಿಕೊಳ್ಳುತ್ತಿರುವ 4ನೇ ನಾಯಕ ಅಶ್ವಿನ್‌. ಈ ಹಿಂದೆ ಮುಂಬೈ ನಾಯಕ ರೋಹಿತ್‌ ಶರ್ಮಾ, ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ರಾಜಸ್ಥಾನದ ಅಜಿಂಕ್ಯ ರಹಾನೆಗೆ ಬಿಸಿಸಿಐ ದಂಡ ವಿಧಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಪಂದ್ಯದ ಬ್ರೇಕ್ ಅನ್ನು 20 ನಿಮಿಷದ ಬದಲಾಗಿ 10 ನಿಮಿಷಕ್ಕೆ ಇಳಿಸಬೇಕು ಎಂದು ಸಲಹೆ ನೀಡಿದ್ದರು.