ಈ ವರ್ಷ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸದ ಕಾರಣ ಕೊಹ್ಲಿ, ರೋಹಿತ್ ಹಾಗೂ ರಹಾನೆ ತಲಾ 12 ಲಕ್ಷ ರುಪಾಯಿ ದಂಡ ಹಾಕಿಸಿಕೊಂಡಿದ್ದಾರೆ. ಈ ಕುರಿತಂತೆ ಎಬಿ ಡಿವಿಲಿಯರ್ಸ್ ತುಟಿಬಿಚ್ಚಿದ್ದಾರೆ.
ನವದೆಹಲಿ: ಐಪಿಎಲ್‌ನಲ್ಲಿ ನಿಧಾನಗತಿ ಬೌಲಿಂಗ್‌ಗೆ ಪರಿಹಾರ ಕಂಡುಕೊಳ್ಳಬೇಕಿದ್ದರೆ ಇನ್ನಿಂಗ್ಸ್ ವಿರಾಮವನ್ನು 20ರಿಂದ 10 ನಿಮಿಷಗಳಿಗೆ ಇಳಿಸಬೇಕು ಎಂದು ಆರ್‌ಸಿಬಿ ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸದ ಕಾರಣ ಕೊಹ್ಲಿ, ರೋಹಿತ್ ಹಾಗೂ ರಹಾನೆ ತಲಾ 12 ಲಕ್ಷ ರುಪಾಯಿ ದಂಡ ಹಾಕಿಸಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಬಿಡಿ ಅನುಪಸ್ಥಿತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 10 ರನ್’ಗಳ ರೋಚಕ ಗೆಲುವು ಸಾಧಿಸಿತ್ತು. ಈ ಮೂಲಕ ಪ್ಲೇ ಆಪ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
