Pro Kabaddi League ಪುಣೇರಿ ಪಲ್ಟನ್‌ಗೆ ಸತತ 7ನೇ ಜಯ!
ಭಾನುವಾರ ನಡೆದ ತಮಿಳ್ ತಲೈವಾಸ್ ವಿರುದ್ಧದ ಪಂದ್ಯದಲ್ಲಿ ಪುಣೇರಿ 29-26 ಅಂಕಗಳ ರೋಚಕ ಗೆಲುವು ಸಾಧಿಸಿತು. ಸಮಬಲದ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದ ಕೊನೆಯ ರೈಡ್ ಫಲಿತಾಂಶವನ್ನು ನಿರ್ಧರಿಸಿತು.
ಮುಂಬೈ(ಜ.08): ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಕನ್ನಡಿಗ ಬಿ.ಸಿ.ರಮೇಶ್ ಮಾರ್ಗದರ್ಶನದಲ್ಲಿ ಆಡುತ್ತಿರುವ ಪುಣೇರಿ ಪಲ್ಟನ್ ಓಟಕ್ಕೆ ತಡೆಯೇ ಇಲ್ಲದಂತಾಗಿದೆ. ತಂಡ ಸತತ 7ನೇ ಜಯ ಸಾಧಿಸಿದ್ದು, ಒಟ್ಟು 10 ಪಂದ್ಯಗಳಲ್ಲಿ 9 ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.
ಭಾನುವಾರ ನಡೆದ ತಮಿಳ್ ತಲೈವಾಸ್ ವಿರುದ್ಧದ ಪಂದ್ಯದಲ್ಲಿ ಪುಣೇರಿ 29-26 ಅಂಕಗಳ ರೋಚಕ ಗೆಲುವು ಸಾಧಿಸಿತು. ಸಮಬಲದ ಹೋರಾಟಕ್ಕೆ ಸಾಕ್ಷಿಯಾದ ಪಂದ್ಯದ ಕೊನೆಯ ರೈಡ್ ಫಲಿತಾಂಶವನ್ನು ನಿರ್ಧರಿಸಿತು.
Ranji Trophy: ಪಂಜಾಬ್ ಎದುರು ಕರ್ನಾಟಕದ ಗೆಲುವಿಗೆ ಬೇಕು 7 ವಿಕೆಟ್!
ಕೊನೆಯ 1 ನಿಮಿಷ ಬಾಕಿ ಇದ್ದಾಗ 2 ಅಂಕ ಮುನ್ನಡೆ ಕಾಯ್ದುಕೊಂಡಿದ್ದ ಪುಣೇರಿ, ಸತತ 2 ರೈಡ್‌ಗಳಲ್ಲಿ ಅಂಕ ಗಳಿಸದೆ ಪಂದ್ಯದ ಕೊನೆಯ ರೈಡ್‌ನಲ್ಲಿ ಅಂಕ ಗಳಿಸಲೇ ಬೇಕಾದ ಅನಿವಾರ್ಯತೆ ಸಿಲುಕಿಕೊಂಡಿತು. ಡು ಆರ್ ಡೈ ರೈಡ್‌ನಲ್ಲಿ ನಾಯಕ ಅಸ್ಲಾಂ ಪರ್ಸ್ಯೂಟ್ ಮೂಲಕ 1 ಅಂಕ ಗಳಿಸಲು ಯಶಸ್ವಿಯಾದರು. ಅಂಪೈರ್‌ಗಳು ಮೊದಲು ಅಂಕ ನೀಡದಿದ್ದರೂ, ರಿವ್ಯೂ ಬಳಸಿಕೊಂಡು ಪುಣೆ ಅಂಕ ತನ್ನದಾಗಿಸಿಕೊಂಡು ಗೆಲುವನ್ನು ಖಚಿತಪಡಿಸಿಕೊಂಡಿತು. ಒಂದು ವೇಳೆ ಅಸ್ಲಾಂಗೆ ಅಂಕ ಸಿಗದೆ ಹೋಗಿದ್ದರೆ, ಪಂದ್ಯ ಟೈ ಆಗುತ್ತಿತ್ತು.
ಭಾನುವಾರದ 2ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ 41-35ರಲ್ಲಿ ಗೆಲುವು ಸಾಧಿಸಿತು.
ಇಂದಿನ ಪಂದ್ಯಗಳು:
ಬೆಂಗಳೂರು ಬುಲ್ಸ್-ಪಾಟ್ನಾ ಪೈರೇಟ್ಸ್, ರಾತ್ರಿ 8ಕ್ಕೆ
ಯು ಮುಂಬಾ-ದಬಾಂಗ್ ಡೆಲ್ಲಿ, ರಾತ್ರಿ 9ಕ್ಕೆ.
2ನೇ ಆವೃತ್ತಿ ಹೈದ್ರಾಬಾದ್ ಫಾರ್ಮುಲಾ-ಇ ರೇಸ್ ರದ್ದು
ಹೈದರಾಬಾದ್: ನೂತನ ತೆಲಂಗಾಣ ಸರ್ಕಾರ ಒಪ್ಪಂದಕ್ಕೆ ಧಕ್ಕೆ ಹಿನ್ನೆಲೆಯಲ್ಲಿ ಫೆ.10ರಂದು ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಇಂಡಿಯನ್ ಫಾರ್ಮುಲಾ-ಇ ರೇಸ್ ರದ್ದುಗೊಂಡಿದೆ. ಈ ಬಗ್ಗೆ ಶುಕ್ರವಾರ ಫಾರ್ಮುಲಾ ಇ ಪ್ರಕಟನೆ ನೀಡಿದ್ದು, ‘ರೇಸ್ ಆತಿಥ್ಯಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸರ್ಕಾರದ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯು ಒಪ್ಪಂದದ ಅನುಸಾರ ನಡೆದುಕೊಂಡಿಲ್ಲ. ಹೀಗಾಗಿ ರೇಸ್ ರದ್ದುಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದೆ. ಚೊಚ್ಚಲ ಆವೃತ್ತಿಯ ರೇಸ್ ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದಿತ್ತು.
ಹುಕ್ಕಾ ಸ್ಮೋಕ್ ಮಾಡಿದ ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ..! ವಿಡಿಯೋ ವೈರಲ್
ಬ್ರಿಜ್ ವಿರುದ್ಧ ಆರೋಪಕ್ಕೆ ಸಾಕ್ಷ್ಯಗಳಿವೆ: ಪೊಲೀಸ್
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಕುಸ್ತಿಪಟುಗಳ ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳಿವೆ ಎಂದು ಡೆಲ್ಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಬ್ರಿಜ್ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ಪೊಲೀಸರು, ಬ್ರಿಜ್ ಹಾಗೂ ಡಬ್ಲ್ಯುಎಫ್‌ಐ ಮಾಜಿ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧದ ಆರೋಪಕ್ಕೆ ಸಾಕ್ಷ್ಯಗಳಿರುವ ಬಗ್ಗೆ ಮಾಹಿತಿ ನೀಡಿದರು. ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವುದಕ್ಕೆ ಬ್ರಿಜ್‌ಗೆ ವಿನಾಯಿತಿ ನೀಡಿರುವ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಶನಿವಾರ ನಿಗದಿಪಡಿಸಿದೆ.