Ranji Trophy: ಪಂಜಾಬ್ ಎದುರು ಕರ್ನಾಟಕದ ಗೆಲುವಿಗೆ ಬೇಕು 7 ವಿಕೆಟ್‌!

362 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಪಂಜಾಬ್‌, ಮೊದಲ ವಿಕೆಟ್‌ಗೆ 192 ರನ್‌ಗಳ ಬೃಹತ್‌ ಮುನ್ನಡೆ ಪಡೆಯಿತು. ಪ್ರಭ್‌ಸಿಮ್ರನ್‌ ಸಿಂಗ್‌ 100 ರನ್‌ ಬಾರಿಸಿದರೆ, ಅಭಿಷೇಕ್‌ ಶರ್ಮಾ 91 ರನ್‌ ಸಿಡಿಸಿದರು, ಆದರೆ ಇವರಿಬ್ಬರು 5 ಎಸೆತಗಳ ಅಂತರದಲ್ಲಿ ಔಟಾಗಿದ್ದು ಕರ್ನಾಟಕಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು.

Ranji Trophy Karnataka 7 wickets away from season first win against Punjab kvn

ಹುಬ್ಬಳ್ಳಿ(ಜ.08): 2023-24ರ ರಣಜಿ ಟ್ರೋಫಿ ಋತುವನ್ನು ಇನ್ನಿಂಗ್ಸ್‌ ಜಯದೊಂದಿಗೆ ಆರಂಭಿಸುವ ನಿರೀಕ್ಷೆಯಲ್ಲಿರುವ ಕರ್ನಾಟಕ, ಪಂಜಾಬ್‌ ವಿರುದ್ಧ ಗೆಲುವು ಸಾಧಿಸಲು ಇನ್ನು 7 ವಿಕೆಟ್‌ ಬೇಕಿದೆ. ಮೊದಲ ಇನ್ನಿಂಗ್ಸಲ್ಲಿ 8 ವಿಕೆಟ್‌ಗೆ 514 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡ ಕರ್ನಾಟಕ, 2ನೇ ಇನ್ನಿಂಗ್ಸಲ್ಲಿ ಪಂಜಾಬ್‌ ಉತ್ತಮ ಆರಂಭ ಪಡೆದರೂ 3ನೇ ದಿನದಂತ್ಯಕ್ಕೆ 3 ವಿಕೆಟ್‌ ಕಬಳಿಸಲು ಯಶಸ್ವಿಯಾಯಿತು.

362 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಪಂಜಾಬ್‌, ಮೊದಲ ವಿಕೆಟ್‌ಗೆ 192 ರನ್‌ಗಳ ಬೃಹತ್‌ ಮುನ್ನಡೆ ಪಡೆಯಿತು. ಪ್ರಭ್‌ಸಿಮ್ರನ್‌ ಸಿಂಗ್‌ 100 ರನ್‌ ಬಾರಿಸಿದರೆ, ಅಭಿಷೇಕ್‌ ಶರ್ಮಾ 91 ರನ್‌ ಸಿಡಿಸಿದರು, ಆದರೆ ಇವರಿಬ್ಬರು 5 ಎಸೆತಗಳ ಅಂತರದಲ್ಲಿ ಔಟಾಗಿದ್ದು ಕರ್ನಾಟಕಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು.

ಆಘ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ, ರೋಹಿತ್-ಕೊಹ್ಲಿ ವಾಪಸ್!

3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಮನ್‌ ಧೀರ್‌(20) ಸಹ ಪೆವಿಲಿಯನ್‌ ಸೇರಿದ್ದು, ನಾಯಕ ಮನ್‌ದೀಪ್‌ ಸಿಂಗ್‌ (20), ನೇಹಲ್‌ ವಧೇರಾ (09) ಕೊನೆಯ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಕರ್ನಾಟಕ ಈ ಪಂದ್ಯದಲ್ಲಿ ಸೋಲುವ ಸಾಧ್ಯತೆಯನ್ನು ತಳ್ಳಿಹಾಕಬಹುದು, ಒಂದು ವೇಳೆ ಪಂಜಾಬ್‌ ಹೋರಾಟ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಂಡರೂ ರಾಜ್ಯಕ್ಕೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದ ಮೇಲೆ 3 ಅಂಕ ಸಿಗಲಿದೆ, ಆದರೆ ಮೊದಲ 3 ದಿನ ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೆಲುವು ಸಾಧಿಸದಿದ್ದರೆ ಮಯಾಂಕ್‌ ಪಡೆಗೆ ನಿರಾಸೆ ಉಂಟಾಗುವುದು ಖಚಿತ.

ಇನ್ನು, 2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 461 ರನ್‌ ಗಳಿಸಿದ್ದ ಕರ್ನಾಟಕ, ಭಾನುವಾರ ಆ ಮೊತ್ತಕ್ಕೆ ಇನ್ನೂ 53 ರನ್‌ ಸೇರಿಸಿ, 500 ರನ್ ದಾಟಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಶರತ್‌ ಶ್ರೀನಿವಾಸ್‌ 76 ರನ್‌ ಗಳಿಸಿ ಔಟಾದರೆ, ಚೊಚ್ಚಲ ಪಂದ್ಯವನ್ನಾಡುತ್ತಿರುವ ರೋಹಿತ್‌ ಕುಮಾರ್‌ ಔಟಾಗದೆ 22, ವೈಶಾಖ್‌ 19 ರನ್‌ ಕೊಡುಗೆ ನೀಡಿದರು.

ಕಪಿಲ್ ದಾಖಲೆ ಮುರಿಯುವ ಹೊಸ್ತಿಲಲ್ಲಿ ಬುಮ್ರಾ..! ಸರ್ವಶ್ರೇಷ್ಠ ಫಾಸ್ಟ್ ಬೌಲರ್ ಆಗ್ತಾರಾ ಜಸ್ಪ್ರೀತ್..?

ಸ್ಕೋರ್‌: 
ಪಂಜಾಬ್‌ 152 ಹಾಗೂ 238/3 (ಪ್ರಭ್‌ಸಿಮ್ರನ್‌ 100, ಅಭಿಷೇಕ್‌ 91, ಸಮರ್ಥ್‌ 1-12, ವಿದ್ವತ್‌ 1-28), 
ಕರ್ನಾಟಕ 514/8 ಡಿ.

ಪ್ರ.ದರ್ಜೆ ಕ್ರಿಕೆಟ್‌ನಲ್ಲಿ 17ನೇ ದ್ವಿಶತಕ ಬಾರಿಸಿದ ಪೂಜಾರ

ರಾಜ್‌ಕೋಟ್‌: ಜಾರ್ಖಂಡ್‌ ವಿರುದ್ಧ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಸೌರಾಷ್ಟ್ರದ ತಾರಾ ಬ್ಯಾಟರ್‌ ಚೇತೇಶ್ವರ್‌ ಪೂಜಾರ ಔಟಾಗದೆ 243 ರನ್‌ ಸಿಡಿಸಿ ದಾಖಲೆ ಬರೆದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪೂಜಾರಗಿದು 17ನೇ ದ್ವಿಶತಕ. ಅತಿಹೆಚ್ಚು ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪೂಜಾರ ಜಂಟಿ 4ನೇ ಸ್ಥಾನಕ್ಕೇರಿದರು. ಇಂಗ್ಲೆಂಡ್‌ನ ಹರ್ಬೆರ್ಟ್‌ ಸಟ್ಕ್ಲಿಫ್‌ ಹಾಗೂ ಮಾರ್ಕ್‌ ರಾಮ್‌ಪ್ರಕಾಶ್‌ರ ದಾಖಲೆಯನ್ನು ಸರಿಗಟ್ಟಿದರು. 37 ದ್ವಿಶತಕ ಬಾರಿಸಿರುವ ಡಾನ್‌ ಬ್ರಾಡ್ಮನ್‌ ಮೊದಲ ಸ್ಥಾನದಲ್ಲಿದ್ದರೆ, ವ್ಯಾಲಿ ಹ್ಯಾಮಂಡ್‌ (36), ಪ್ಯಾಟ್ಸಿ ಹೆಂಡ್ರೆನ್‌ (22) ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳಲ್ಲಿದ್ದಾರೆ.

Latest Videos
Follow Us:
Download App:
  • android
  • ios