Asianet Suvarna News Asianet Suvarna News

ಹುಕ್ಕಾ ಸ್ಮೋಕ್ ಮಾಡಿದ ಕೂಲ್ ಕ್ಯಾಪ್ಟನ್‌ ಎಂ ಎಸ್ ಧೋನಿ..! ವಿಡಿಯೋ ವೈರಲ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರೂ ಫಿಟ್ನೆಸ್ ವಿಚಾರದಲ್ಲಿ ಎಂದಿಗೂ ರಾಜಿಯಾಗದ ಧೋನಿ, ಸದ್ಯ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲವನ್ನೇ ಹುಟ್ಟುಹಾಕಿದೆ.

Video of MS Dhoni smoking hookah during social event goes viral kvn
Author
First Published Jan 7, 2024, 2:50 PM IST

ಮುಂಬೈ(ಜ.07): ಟೀಂ ಇಂಡಿಯಾ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ ಎಸ್ ಧೋನಿ ತಮ್ಮ ಸರಳ ನಡೆನುಡಿಯ ಮೂಲಕವೇ ಹೆಚ್ಚು ಗಮನ ಸೆಳೆದಿದ್ದಾರೆ. ಹೀಗಿರುವ ಧೋನಿ, ಇದೀಗ ಹುಕ್ಕಾ ಸೇದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ಮಹೇಂದ್ರ ಸಿಂಗ್ ಧೋನಿ ಹೊಸ ವರ್ಷದಂದು ದುಬೈನಿಂದ ತಂದ ಹುಕ್ಕಾವನ್ನು ರಿಷಭ್ ಪಂತ್, ಬಾಲಿವುಡ್ ನಟಿ ಕೃತಿ ಸನನ್ ಅವರೂ ಕೂಡಾ ಹುಕ್ಕಾ ಸೇದುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರೂ ಫಿಟ್ನೆಸ್ ವಿಚಾರದಲ್ಲಿ ಎಂದಿಗೂ ರಾಜಿಯಾಗದ ಧೋನಿ, ಸದ್ಯ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲವನ್ನೇ ಹುಟ್ಟುಹಾಕಿದೆ.

ICC Test Rankings: ಕೇಪ್‌ಟೌನ್ ಟೆಸ್ಟ್ ಗೆದ್ದರೂ 2ನೇ ಸ್ಥಾನಕ್ಕೆ ಕುಸಿದ ಭಾರತ

ಹೀಗಿದೆ ನೋಡಿ ಆ ವಿಡಿಯೋ:

ಈ ವಿಡಿಯೋ ವೈರಲ್ ಆಗುತ್ತಿರುವುದು ನಿಜವೇ ಆಗಿದ್ದರೂ, ಯಾವಾಗ ಧೋನಿ ಈ ರೀತಿ ಹುಕ್ಕಾ ಸೇದಿದ್ದು ಎನ್ನುವ ವಿಚಾರ ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ತುಂಬಾ ಸಮಯದ ಹಿಂದೆ ಖಾಸಗಿ ಪಾರ್ಟಿಯಲ್ಲಿ ಈ ಹುಕ್ಕಾ ಪಾರ್ಟಿ ನಡೆದಿರುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.

ಧೋನಿಗೆ ವಂಚಿಸಿಲ್ಲ, ಅವರೇ ವಂಚಕ: ಮಿಹಿರ್‌ ದಿವಾಕರ್‌ ತಿರುಗೇಟು

ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಸ್ಟ್ರೇಲಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ಮಾಜಿ ಕ್ರಿಕೆಟಿಗ ಜಾರ್ಜ್ ಬೈಲಿ ಈ ಹಿಂದೆ ಧೋನಿ ಕುರಿತಾಗಿ ನೀಡಿದ್ದ ಹೇಳಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಜಾರ್ಜ್ ಬೈಲಿ, ಧೋನಿ ಹುಕ್ಕಾ ಸೇಯಲು ಇಷ್ಟಪಡುತ್ತಾರೆ ಎಂದು ಹೇಳಿದ್ದರು.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ 2023ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ 5ನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿತ್ತು. ಕಳೆದ ಬಾರಿಯ ಐಪಿಎಲ್ ಧೋನಿ ಪಾಲಿಗೆ ಕೊನೆಯ ಐಪಿಎಲ್ ಎಂದು ಹಲವು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ಧೋನಿ ತಾವು ಇನ್ನೂ ಒಂದು ಐಪಿಎಲ್ ಆಡುವುದಾಗಿ ಕಳೆದ ಬಾರಿಯೇ ಘೋಷಿಸಿದ್ದರು. 2024ರ ಐಪಿಎಲ್‌ನಲ್ಲೂ ಧೋನಿ ನಾಯಕನಾಗಿ ಸಿಎಸ್‌ಕೆ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತ ಎನಿಸಿದೆ. ಅದೇ ರೀತಿ 2024ರ ಐಪಿಎಲ್ ಧೋನಿ ಆಡಲಿರುವ ಕೊನೆಯ ಐಪಿಎಲ್ ಎನಿಸಿಕೊಂಡರೂ ಅಚ್ಚರಿಯಿಲ್ಲ.

Follow Us:
Download App:
  • android
  • ios