Asianet Suvarna News Asianet Suvarna News

ವೇದಿಕೆಯಲ್ಲಿ ನಟನನ್ನು ಹೂವಂತೆ ಸಲೀಸಾಗಿ ಎತ್ತಿದ ವೇಟ್‌ಲಿಫ್ಟರ್ ಚಾನು: ವಿಡಿಯೋ ವೈರಲ್

ಪ್ರಶಸ್ತಿ ಸಮಾರಂಭವೊಂದರ ವೇದಿಕೆಯಲ್ಲಿ ಮೀರಾಬಾಯಿ ಚಾನು ಅವರು ನಟ ಅಪಾರಶಕ್ತಿ ಖುರಾನಾ ಅವರನ್ನು 7 ಮಲ್ಲಿಗೆ ತೂಕದ ರಾಜಕುಮಾರನ ಎತ್ತಿದಂತೆ ಮೇಲಕ್ಕೆತ್ತಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೋಡುಗರ ಮೊಗದಲ್ಲಿ ನಗು ಮೂಡಿಸುತ್ತಿದೆ. 

Proud Indian women Weightlifter Mirabai Chanu lift actor Aparshakti Khurana easily on stage akb
Author
First Published Oct 19, 2022, 3:35 PM IST

ಮುಂಬೈ: ದೇಶದ ಹೆಮ್ಮೆಯ ಕ್ರೀಡಾಪಟು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಯಾರಿಗೆ ಗೊತ್ತಿಲ್ಲ ಹೇಳಿ. ಕ್ರೀಡಾಳುವಾಗಿ ಅವರೇನು ಎಂಬುದು ಎಲ್ಲರಿಗೂ ಗೊತ್ತು. ಆದರೆ ಅದರೊಂದಿಗೆ ಅವರೊಬ್ಬ ತಮಾಷೆಯ ವ್ಯಕ್ತಿತ್ವ ಹೊಂದಿರುವವರು ಎಂಬುದು ಅನೇಕರಿಗೆ ಗೊತ್ತಿಲ್ಲ. ಈಗ ಪ್ರಶಸ್ತಿ ಸಮಾರಂಭವೊಂದರ ವೇದಿಕೆಯಲ್ಲಿ ಮೀರಾಬಾಯಿ ಚಾನು ಅವರು ನಟ ಅಪಾರಶಕ್ತಿ ಖುರಾನಾ ಅವರನ್ನು 7 ಮಲ್ಲಿಗೆ ತೂಕದ ರಾಜಕುಮಾರನ ಎತ್ತಿದಂತೆ ಮೇಲಕ್ಕೆತ್ತಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೋಡುಗರ ಮೊಗದಲ್ಲಿ ನಗು ಮೂಡಿಸುತ್ತಿದೆ. ನೀವು ಏಳು ಮಲ್ಲಿಗೆ ತೂಕದ ರಾಜಕುಮಾರಿಯ ಕತೆ ಕೇಳಿರಬಹುದು. ಆದರೆ ಇಲ್ಲಿ ಚಾನು ಎತ್ತಿದ್ದು ರಾಜಕುಮಾರಿ ಅಲ್ಲ ರಾಜಕುಮಾರ. ಹೌದು ಹೈ ಹೀಲ್ಡ್ ಧರಿಸಿರುವ ಮೀರಬಾಯಿ ಚಾನು ಅವರು ವೇದಿಕೆ ಮೇಲೆಯೇ ಸಲೀಸಾಗಿ ಅಪಾರಶಕ್ತಿ ಖುರಾನಾ (Aparshakti Khurana) ಅವರನ್ನು ಮೇಲೆತ್ತಿದ್ದಾರೆ. 

ಟೈಮ್ಸ್ ಆಫ್ ಇಂಡಿಯಾ ಸಮೂಹ ನೀಡಲ್ಪಡುವ ಟಿಒಐ ಕ್ರೀಡಾ ಪ್ರಶಸ್ತಿ ಪ್ರದಾನ (Award Function) ಸಮಾರಂಭದಲ್ಲಿ ಈ ಅಪರೂಪದ ತಮಾಷೆಯ ಕ್ಷಣ ಕ್ಯಾಮರಾದಲ್ಲಿ ಸೆರೆ ಆಯ್ತು. ಮೀರಬಾಯಿ ಚಾನು ಹಾಗೂ ಕಾಮನ್‌ವೆಲ್ತ್ ಗೇಮ್ಸ್ 2022 ರ ಚಿನ್ನದ ಪದಕ (Gold Medal Winner) ವಿಜೇತೆ ಅಚಿಂತಾ ಶೆಯುಲಿ (Achinta Sheuli) ಅವರಿಗೆ ಈ ಸಮಾರಂಭದಲ್ಲಿ ವೇಟ್ ಲಿಫ್ಟರ್ ಆಫ್ ದ ಇಯರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ಅವರು ವೇದಿಕೆಯಲ್ಲಿ ಇದ್ದ ಸಮಾರಂಭದ ನಿರೂಪಕ, ನಟ ಅಪಾರಶಕ್ತಿ ಖುರಾನಾ ಅವರನ್ನು ಸುಲಭವಾಗಿ ಎತ್ತಿದರು. 200 ಕೆಜಿ ಎತ್ತಿದ ನನಗೆ ಇದ್ಯಾವ ಲೆಕ್ಕ ಎಂಬಂತ ಲುಕ್ ಇತ್ತು ಮೀರಾ ಮುಖದಲ್ಲಿ. ಈ ತಮಾಷೆಯ ಕ್ಷಣ ಎಲ್ಲರ ನಗುವಿಗೆ ಕಾರಣವಾಯಿತು.

 

Commonwealth Games ಭಾರತಕ್ಕೆ ಮೊದಲ ಚಿನ್ನದ ಕಿರೀಟ, ಮೀರಾಬಾಯಿ ಚಾನು ಹೊಸ ದಾಖಲೆ!

ಮೀರಾಬಾಯಿ ಚಾನು ( Mirabai Chanu) ದೇಶವು ಶ್ರೇಷ್ಠ ಕ್ರೀಡಾ ಪ್ರತಿಭೆಗಳಲ್ಲಿ ಒಬ್ಬರಾಗಿದ್ದು, ಈ ವೇಟ್‌ಲಿಫ್ಟರ್ (Weightlifter) 200 ಕೆಜಿಗಿಂತ ಹೆಚ್ಚಿನ ತೂಕವನ್ನು ಸುಲಭವಾಗಿ ಎತ್ತಬಲ್ಲರು. ಸತತವಾಗಿ ಹಲವು ಉತ್ತಮ ಪ್ರದರ್ಶನ ನೀಡಿರುವ ಚಾನು ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಬಾಚಿಕೊಂಡು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಇದೇ ಸಮಾರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2022 ರ ಚಿನ್ನದ ಪದಕ ವಿಜೇತೆ ಅಚಿಂತಾ ಶೆಯುಲಿ ಅವರೊಂದಿಗೆ ಮೀರಾಬಾಯಿ ಚಾನು ವರ್ಷದ ವೇಟ್‌ಲಿಫ್ಟರ್ ಪ್ರಶಸ್ತಿಯನ್ನು ಪಡೆದರು. ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ವೇದಿಕೆಯಲ್ಲಿ ಅಪಾರಶಕ್ತಿ ಖುರಾನಾ ಅವರನ್ನು ಸುಲಭವಾಗಿ ಎತ್ತಿದರು. 

ಆ ಕ್ಷಣದ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ(Instagram) ಪೋಸ್ಟ್ ಮಾಡಲಾಗಿದ್ದು, ವಿಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಚಾನು ಪ್ರಶಸ್ತಿಯ ಜೊತೆ ಕಾರ್ಯಕ್ರಮ ನಿರೂಪಕನನ್ನು ಕೂಡ ಮೇಲೆತ್ತಿದರು ಎಂದು ಸ್ವತಃ ಅಪಾರಶಕ್ತಿ ಖುರಾನಾ ಬರೆದುಕೊಂಡಿದ್ದಾರೆ. ಇನ್ನು ಹೈ ಹೀಲ್ ಧರಿಸಿ ಆಕೆ ನಟನನ್ನು ಎತ್ತಿದ್ದನ್ನು ನೋಡಿ ಅನೇಕರು ಅಚ್ಚರಿಯ ಜೊತೆ ಆಕೆಯ ಸಮತೋಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕೆಯ ಬ್ಯಾಲೆನ್ಸ್ ಬಗ್ಗೆ ನಿಜಕ್ಕೂ ಮಾತನಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬರು 

ಈ ಪೋಸ್ಟ್‌ನ್ನು ಮೀರಾಬಾಯಿ ಚಾನು ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೀರಾಬಾಯಿ ಚಾನು ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಾಗ, ಕರ್ಣಂ ಮಲ್ಲೇಶ್ವರಿ ನಂತರ ಈ ಕ್ರೀಢಾಕೂಟದಲ್ಲಿ ವೇಟ್ ಲಿಫ್ಟಿಂಗ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ವೇಯ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ಒಲಿಂಪಿಕ್ಸ್‌ನಲ್ಲಿ ಕ್ರೀಡೆಯಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಅಷ್ಟೇ ಅಲ್ಲದೇ  119 ಕೆಜಿ ಎತ್ತುವ ಮೂಲಕ 49 ಕೆಜಿ ಮಹಿಳಾ ವಿಭಾಗದಲ್ಲಿ ಕ್ಲೀನ್ ಮತ್ತು ಜರ್ಕ್‌ನಲ್ಲಿ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಜೊತೆಗೆ ಈ ರೆಕಾರ್ಡ್ ಹೊಂದಿರುವ ಏಕೈಕ ಭಾರತೀಯ ವೇಟ್‌ಲಿಫ್ಟರ್ ಆಗಿದ್ದಾರೆ. 2014 ರಿಂದ 2022 ರವರೆಗೆ ಸತತವಾಗಿ ಮೂರು ಕಾಮನ್‌ವೆಲ್ತ್ ಕ್ರೀಡಾಕೂಟದದಲ್ಲಿ ಪದಕಗಳನ್ನು ಗೆದ್ದಿದ್ದಾರೆ. 2014 ಆವೃತ್ತಿಯಲ್ಲಿ ಬೆಳ್ಳಿ ಗೆದ್ದರು ಮತ್ತು ನಂತರ 2018 ಮತ್ತು 2022 ರಲ್ಲಿ ಸತತ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ನೀರಜ್‌ ಚೋಪ್ರಾ ಸೇರಿ ಮೂವರು ಪದಕ ವಿಜೇತರ ಒಪ್ಪಂದ ಮುಂದುವರಿಸಿದ ಮೊಬಿಲ್ ಇಂಡಿಯಾ!

Follow Us:
Download App:
  • android
  • ios