Asianet Suvarna News Asianet Suvarna News

ನೀರಜ್‌ ಚೋಪ್ರಾ ಸೇರಿ ಮೂವರು ಪದಕ ವಿಜೇತರ ಒಪ್ಪಂದ ಮುಂದುವರಿಸಿದ ಮೊಬಿಲ್ ಇಂಡಿಯಾ!

  • ಒಲಿಂಪಿಕ್ಸ್ ಪದಕ ವಿಜೇತರ ಜೊತೆಗಿನ ರಾಯಭಾರಿ ಒಪ್ಪಂಗ ಮುಂದುವರಿಕೆ
  • ಬ್ರ್ಯಾಂಡ್ ಅಂಬಾಸಿಡರ್ ಒಪ್ಪಂದ ನವೀಕರಿಸಿದ ಮೊಬಿಲ್‌ ಇಂಡಿಯಾ 
  • ನೀರಜ್‌ ಚೋಪ್ರಾ, ಮೀರಾಬಾಯಿ ಚಾನು ಮತ್ತು ಬಜರಂಗ ಪೂನಿಯ 
Mobil India renews brand ambassador contract with Olympics medalist Neeraj Chopra and others ckm
Author
Bengaluru, First Published Nov 9, 2021, 10:34 PM IST
  • Facebook
  • Twitter
  • Whatsapp

ಬೆಂಗಳೂರು(ನ.09): ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತರಾದ ನೀರಜ್‌ ಚೋಪ್ರಾ(Neeraj Chopra), ಮೀರಾಬಾಯಿ ಚಾನು(Mirabai Chanu) ಮತ್ತು ಬಜರಂಗ್‌ ಪೂನಿಯಾ(Bajrang Punia) ಅವರ ಬ್ರಾಂಡ್ ಅಂಬಾಸಿಡರ್ ಒಪ್ಪಂದವನ್ನು ಮೊಬಿಲ್‌ ಇಂಡಿಯಾ ಮುಂದುವರಿಸಿದೆ.  ಎಕ್ಸಾನ್‌ ಮೊಬಿಲ್‌ ಪ್ರೈವೇಟ್‌ ಲಿಮಿಟೆಡ್‌ ಮಹತ್ವದ ಘೋಷಣೆ ಮಾಡಿದೆ.  ನವದೆಹಲಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ  ಮೊಬಿಲ್ ಇಂಡಡಿಯಾ ಈ ಘೋಷಣೆ ಮಾಡಿದೆ. ನೀರಜ್ ಚೋಪ್ರಾ, ಮೀರಾ ಬಾಯಿ ಚಾನು ಹಾಗೂ ಬಜರಂಗ್ ಪೂನಿಯಾ ದೇಶದ ಯೂಥ್ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ದೇಶದಲ್ಲಿ ಜಾವಲಿನ್ ಥ್ರೋ, ವೇಯ್ಟ್ ಲಿಫ್ಟಿಂಗ್ ಹಾಗೂ ಕುಸ್ತಿ ಕುರಿತು ಆಸಕ್ತಿ ಹೆಚ್ಚಾಗಿದೆ. ಒಲಿಂಪಿಕ್ಸ್ ಪದಕ( Olympics medalist)ಗೆಲುವಿನ ಕಸು ಕಾಣುತ್ತಿದ್ದಾರೆ. ಈ ಬದಲಾವಣೆ ತಂದ ಒಲಿಂಪಿಕ್ಸ್ ಕ್ರೀಡಾಪಟುಗಳ ಜೊತೆಗಿನ ಒಪ್ಪಂದ ನವೀಕರಣ ಅತ್ಯುತ್ತಮ ನಿರ್ಧಾರ ಎಂದು ಮೊಬಿಲ್ ಹೇಳಿದೆ.

ಟೋಕಿಯೋ 2020 ಒಲಿಂಪಿಕ್ಸ್‌ನಲ್ಲಿ ಭಾರತ ಏಳು ಪದಕಗಳನ್ನು ಜಯಿಸುವುದರ ಮೂಲಕ ಅತ್ಯಂತ ಯಶಸ್ವಿ ಎನಿಸಿಕೊಂಡಿತ್ತು. ಭಾರತಕ್ಕೆ ಟ್ರ್ಯಾಕ್‌ ಆಂಡ್‌ ಫೀಲ್ಡ್‌ ಸ್ಪರ್ಧೆಯಲ್ಲಿ ಮೊದಲ ಚಿನ್ನ ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ ಎರಡನೇ ಚಿನ್ನದ ಪದಕವನ್ನು ನೀರಜ್‌ ಚೋಪ್ರಾ ತಂದುಕೊಟ್ಟರೆ, ಮೀರಾಬಾಯಿ ಚಾನು ಅವರು ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದರು. ಕಂಚಿನ ಪದಕ ಗೆದ್ದುಕೊಂಡ ಬಜರಂಗ್‌ ಪೂನಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಪರಿವರ್ತನೆಯ ಸಂಕೇತವಾಗಿ ಮತ್ತು ಸಾಮಾನ್ಯ ಹಿನ್ನೆಲೆಯಿಂದ ಬಂದು ಭಾರತವನ್ನು ಒಲಿಂಪಿಕ್ಸ್‌ನಂಥ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ ಯಶಸ್ಸು ಈ ಎಲ್ಲ ಕ್ರೀಡಾಪಟುಗಳ ನಡುವೆ ಇರುವ ಸಾಮ್ಯತೆಯಾಗಿದೆ.

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ; ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ!

ನೀರಜ್‌ ಚೋಪ್ರಾ, ಮೀರಾಬಾಯಿ ಚಾನು ಮತ್ತು ಬಜರಂಗ ಪೂನಿಯ ಅವರೊಂದಿಗೆ ನಮ್ಮ ಬ್ರಾಂಡ್‌ ಸಂಬಂಧವನ್ನು ನವೀಕರಿಸಲು ನಮಗೆ ತುಂಬಾ ಸಂತೋಷವಾಗುತ್ತಿದೆ. ಈ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯುವ ಮೊದಲೇ ನಾವು ಅವರೊಂದಿಗೆ ಗುರುತಿಸಿಕೊಂಡಿದ್ದೆವು. ಹಾಗಾಗಿ ಅವರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ, ವಿವಿಧ ಪ್ರಶಸ್ತಿ ಮತ್ತು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಾಗ ನಮಗೆ ಬಹಳ ಖುಷಿಯಾಗುತ್ತದೆ. ಈ ಅಥ್ಲೀಟ್‌ಗಳು ಭಾರತ ಮತ್ತು ತಮ್ಮ ಕ್ಷೇತ್ರದಲ್ಲಿಹೆಸರು ತಂದ ರೀತಿಯಲ್ಲಿಯೇ ನಾವೂ ಮೊಬಿಲ್‌ನ ವಿಶ್ವದರ್ಜೆಯ ಬ್ರಾಂಡ್‌ಗಳ ನಿರ್ಮಾಣಕ್ಕೆ, ಸಿಂಥೆಟಿಕ್‌ ಆಯಿಲ್‌ ಕ್ಷೇತ್ರದ ನಾಯಕತ್ವ ಕಾಪಾಡಿಕೊಳ್ಳಲು, ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲು ಮತ್ತು ದೇಶಕ್ಕೆ ಉತ್ತಮ ಗುಣಮಟ್ಟದ ಉತ್ಪನ್ನ ಮತ್ತು ಸೊಲ್ಯೂಷನ್‌ಗಳನ್ನು ಒದಗಿಸಲು ನಮ್ಮ ಕಠಿಣ ಪರಿಶ್ರಮವನ್ನು ಮುಂದುವರೆಸುತ್ತೇವೆ ಎಂದು ಎಕ್ಸಾನ್‌ಮೊಬಿಲ್‌ ಲೂಬ್ರಿಕೆಂಟ್ಸ್‌ನ ಸಿಇಒ ದೀಪಂಕರ್‌ ಬ್ಯಾನರ್ಜಿ ಹೇಳಿದರು

ಕೊಟ್ಟ ಮಾತು ಉಳಿಸಿದ ಮಹೀಂದ್ರಾ: ಚಿನ್ನದ ಹುಡುಗ ನೀರಜ್‌ಗೆ ದುಬಾರಿ ಗಿಫ್ಟ್!

ಭಾರತಕ್ಕೆ ನಾವು ನೀಡಿದ ಬದ್ಧತೆಯ ಪ್ರಕಾರ ಈ ಮೂವರು ಚಾಂಪಿಯನ್ನರು ʼಫರಕ್‌ ಲಾಕರ್‌ ದೇಖಿಯೇʼ ಘೋಷಣೆಗೆ ಧ್ವನಿ ನೀಡಿದ್ದಾರೆ. ನಮ್ಮ ಕ್ಷಮತೆ, ನಾವೀನ್ಯತೆ ಮತ್ತು ಸಾಮರ್ಥ್ಯ ಮಾತ್ರವಲ್ಲ ನಾಳಿನ ಆಶಾವಾದದ ದಿನಗಳ ಕುರಿತು ಜನರಿಗೆ ಆತ್ಮವಿಶ್ವಾಸವನ್ನೂ ಇದು ಇಮ್ಮಡಿಗೊಳಿಸುತ್ತದೆ. ಅಥ್ಲೀಟ್‌ಗಳು ಸಹಜವಾಗಿಯೇ ನಮ್ಮ ಧ್ಯೇಯಗಳಿಗೆ ಸಮಾನವಾಗಿದ್ದಾರೆ. ಅವರೊಂದಿಗೆ ನಮ್ಮ ಸಂಬಂಧವನ್ನು ವಿಸ್ತರಿಸಲು ಸಂತೋಷವಾಗುತ್ತಿದೆ ಎಂದು  ಎಕ್ಸಾನ್‌ಮೊಬಿಲ್‌ ಲೂಬ್ರಿಕೆಂಟ್ಸ್‌ನ ಕನ್ಸೂಮರ್‌ ಮಾರ್ಕೆಟಿಂಗ್‌, ಮಾರ್ಕೆಟಿಂಗ್‌ ಡೆಪ್ಲಾಯ್‌ಮೆಂಟ್‌ ಜಿಎಂ ಇಮ್ತಿಯಾಜ್‌ ಅಹ್ಮದ್‌ ಹೇಳಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಎಕ್ಸಾನ್‌ಮೊಬಿಲ್‌ ಲೂಬ್ರಿಕೆಂಟ್ಸ್‌ ಸಂಸ್ಥೆ ನೀರಜ್‌ ಚೋಪ್ರಾ, ಮೀರಾಬಾಯಿ ಚಾನು ಮತ್ತು ಬಜರಂಗ ಪೂನಿಯಾ ಅವರನ್ನೊಳಗೊಂಡ ಜಾಹೀರಾತು ಅಭಿಯಾನಗಳ ಮೂಲಕ ಪ್ರಚಾರ ಮಾಡಿದ ತನ್ನ ಹೊಸ ಉತ್ಪನ್ನಗಳಾದ ಮೊಬಿಲ್‌ ಸೂಪರ್‌ ಎಸ್‌ಯುವಿ ಪ್ರೊ ಮತ್ತು ಮೊಬಿಲ್‌ ಸೂಪರ್‌ ಮೊಟೊ 2ಡಬ್ಲ್ಯು ಎಂಜಿನ್‌ ಆಯಿಲ್‌ನ ಸುಧಾರಿತ ಸರಣಿಯನ್ನು ಪ್ರದರ್ಶನಗೊಳಿಸಿತು.

Follow Us:
Download App:
  • android
  • ios