7ನೇ ಆವೃತ್ತಿಯ ಪ್ರೊ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಜಾಂಗ್ ಕುನ್ ಲೀ ನೂತನ ತಂಡ ಸೇರಿಕೊಂಡಿದ್ದಾರೆ. ಆಟಗಾರರ ಹರಾಜಿನ ಕಂಪ್ಲೀಟ್ ಡೀಟೈಲ್ಸ್’ನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಮುಂಬೈ[ಏ.08]: ಬಹುನಿರೀಕ್ಷಿತ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್’ಗೆ ಆಟಗಾರರ ಹರಾಜು ನಡೆಯುತ್ತಿದ್ದು, ದಕ್ಷಿಣ ಕೊರಿಯಾ ಮೂಲದ ಸ್ಟಾರ್ ಕಬಡ್ಡಿ ಪಟು ಜಾಂಗ್ ಕುನ್ ಲೀ ಅವರನ್ನು ಪಾಟ್ನಾ ಪೈರೇಟ್ಸ್ ತಂಡವು 40 ಲಕ್ಷ ನೀಡಿ ಖರೀದಿಸಿದೆ. ಇದೇ ಮೊದಲ ಬಾರಿಗೆ ಕುನ್ ಲೀ ಬೆಂಗಾಲ್ ವಾರಿಯರ್ಸ್ ತೊರೆದು ನೂತನ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 

Scroll to load tweet…

ಇನ್ನು ’ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದ ಏಕೈಕ ವಿದೇಶಿ ಆಟಗಾರ ಇರಾನ್’ನ ಅಬೋಜರ್ ಮಿಘಾನಿಯನ್ನು ಖರೀದಿಸಲು ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್ಸ್, ಯು ಮುಂಬಾ, ಹರಿಯಾಣ ಸ್ಟೀಲರ್ಸ್ ತಂಡಗಳು ಸಾಕಷ್ಟು ಪೈಪೋಟಿ ನಡೆಸಿದವಾದರೂ ಕೊನೆಗೆ ಪಾಟ್ನಾ 75 ಲಕ್ಷ ನೀಡಿ ಖರೀದಿಸಿತು. ಆದರೆ ತೆಲುಗು ಟೈಟಾನ್ಸ್ ತಂಡವು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಪ್ರೊ ಕಬಡ್ಡಿ ಹರಾಜು - 441 ಆಟಗಾರರ ಅದೃಷ್ಟ ಪರೀಕ್ಷೆ!

ಮೊದಲಿಗೆ ನಡೆದ ವಿದೇಶಿ ಆಟಗಾರರ ಹರಾಜಿನಲ್ಲಿ ಮೋಸೆನ್ ಅವರನ್ನು ಯುಪಿ ಯೋಧಾ ತಂಡವು 21 ಲಕ್ಷ ನೀಡಿ ಖರೀದಿಸಿದರೆ, ಹದಿ ಓಸ್ಟಾರಾಕ್ ಅವರನ್ನು ಪಾಟ್ನಾ ಪೈರೇಟ್ಸ್ ತಂಡವು 16 ಲಕ್ಷ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇನ್ನು ಇರಾನಿನ ಆಲ್ರೌಂಡರ್ ಎಸ್ಮಾಯಿಲ್ ನಬೀಭಕ್ಷ್ ಅವರನ್ನು ಬೆಂಗಾಲ್ ವಾರಿಯರ್ಸ್ 77.75 ಲಕ್ಷ ನೀಡಿ ಖರೀದಿಸಿದೆ. ಕೇವಲ 10 ಲಕ್ಷ ಮೂಲಬೆಲೆ ಹೊಂದಿದ್ದ ನಬೀಭಕ್ಷ್ ಖರೀದಿಸಲು ಪಾಟ್ನಾ ಪೈರೇಟ್ಸ್ ತಂಡವು 60 ಲಕ್ಷ ರುಪಾಯಿವರೆಗೂ ಪ್ರಯತ್ನಿಸಿತು.ಯು ಮುಂಬಾ 70 ಲಕ್ಷದವರೆಗೂ ಬಿಡ್ ಮಾಡಿತಾದರೂ ಕೊನೆಗೂ ಬೆಂಗಾಲ್ ತಂಡ ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Scroll to load tweet…

ಬೆಂಗಳೂರು ಬುಲ್ಸ್ ತಂಡವು ಸಂಜಯ್ ಶ್ರೇಷ್ಠರನ್ನು 10 ಲಕ್ಷಕ್ಕೆ ಖರೀದಿಸಿದರೆ, ಸಯೀದ್ ಘಫಾರಿಯನ್ನು ದಬಾಂಗ್ ಡೆಲ್ಲಿ 16.5 ಲಕ್ಷ ನೀಡಿ ಖರೀದಿಸಿದೆ.

Scroll to load tweet…