ಬದಲಾಯ್ತು ಪ್ರೊ ಕಬಡ್ಡಿ ಪಂದ್ಯಗಳ ಸಮಯ

ಈ ಬಾರಿಯ ಪ್ರೊ ಕಬಡ್ಡಿ ಆವೃತ್ತಿಯಲ್ಲಿನ ಪ್ರತಿ ಚರಣದ ಪಂದ್ಯಗಳು ಶನಿವಾರದಂದೇ ಆರಂಭವಾಗಲಿದ್ದು, ಮೊದಲ ದಿನದಿಂದಲೇ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವ ಗುರಿ ಆಯೋಜಕರದ್ದಾಗಿದೆ. ಹೀಗಾಗಿ ಸಮಯದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ.

Pro Kabaddi 2019 Minor changes in timings

ಮುಂಬೈ[ಮೇ.29]: ಬಹು ನಿರೀಕ್ಷಿತ ಪ್ರೊ ಕಬಡ್ಡಿ 7ನೇ ಆವೃತ್ತಿ ಜುಲೈ 20ರಿಂದ ಆರಂಭವಾಗಲಿದ್ದು, ಅಕ್ಟೋಬರ್‌ನಲ್ಲಿ ಕೊನೆಗೊಳ್ಳಲಿದೆ. 

ಪ್ರೊ ಕಬಡ್ಡಿ: ಈ ಸಲ ಇಬ್ಬರೇ ಕೋಟ್ಯಧಿಪತಿಗಳು!

ಈ ಬಾರಿಯ ಆವೃತ್ತಿಯಲ್ಲಿನ ಪ್ರತಿ ಚರಣದ ಪಂದ್ಯಗಳು ಶನಿವಾರದಂದೇ ಆರಂಭವಾಗಲಿದ್ದು, ಮೊದಲ ದಿನದಿಂದಲೇ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವ ಗುರಿ ಆಯೋಜಕರದ್ದಾಗಿದೆ. ಪ್ರೇಕ್ಷಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಪಂದ್ಯಗಳನ್ನು ರಾತ್ರಿ 8ರ ಬದಲು ಸಂಜೆ 7.30ಕ್ಕೆ ಆರಂಭಿಸುವುದಾಗಿ ಲೀಗ್‌ ಆಯುಕ್ತ ಅನುಪಮ್‌ ಗೋಸ್ವಾಮಿ ತಿಳಿಸಿದ್ದಾರೆ.

6ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಗುಜರಾತ್ ಫಾರ್ಚೂನ್’ಜೈಂಟ್ಸ್ ತಂಡವನ್ನು ಮಣಿಸಿ ಬೆಂಗಳೂರು ಬುಲ್ಸ್ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಕೆಲ ತಿಂಗಳುಗಳ ಹಿಂದಷ್ಟೇ 7ನೇ ಆವೃತ್ತಿಯ ಪ್ರೊ ಕಬಡ್ಡಿಗೆ ಆಟಗಾರರ ಹರಾಜು ಕೂಡಾ ನಡೆದಿದೆ. ಈ ಬಾರಿಯೂ 12 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದಾರೆ. 

Latest Videos
Follow Us:
Download App:
  • android
  • ios