Asianet Suvarna News Asianet Suvarna News

ಪ್ರೊ ಕಬಡ್ಡಿ: ಈ ಸಲ ಇಬ್ಬರೇ ಕೋಟ್ಯಧಿಪತಿಗಳು!

6ನೇ ಆವೃತ್ತಿಯ ಹರಾಜಿನಲ್ಲಿ ಬರೋಬ್ಬರಿ 6 ಆಟಗಾರರು ಒಂದು ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಕರಿ| 7ನೇ ಆವೃತ್ತಿಯಲ್ಲಿ ಕೇವಲ ಇಬ್ಬರು ಮಾತ್ರ ಕೋಟಿ ದಾಟಿದ್ದಾರೆ.

two players successful to be the crorepatis in pro kabaddi
Author
Bangalore, First Published Apr 9, 2019, 1:27 PM IST

ಮುಂಬೈ[ಏ.09]: 6ನೇ ಆವೃತ್ತಿಯ ಹರಾಜಿನಲ್ಲಿ ಬರೋಬ್ಬರಿ 6 ಆಟಗಾರರು ಒಂದು ಕೋಟಿಗೂ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರು. ಆದರೆ 7ನೇ ಆವೃತ್ತಿಯಲ್ಲಿ ಕೇವಲ ಇಬ್ಬರು ಮಾತ್ರ ಕೋಟಿ ದಾಟಿದರು. ಸಿದ್ಧಾರ್ಥ್ ದೇಸಾಯಿ ₹1.45 ಕೋಟಿಗೆ ತೆಲುಗು ಟೈಟಾನ್ಸ್ ಪಾಲಾದರೆ, ನಿತಿನ್ ತೋಮರ್‌ರನ್ನು ₹1.20 ಕೋಟಿಗೆ ಪುಣೆ ತಂಡ ಖರೀದಿಸಿತು.

ಕಳೆದ ವರ್ಷ ₹1.51 ಕೋಟಿಗೆ ಬಿಕರಿಯಾಗಿ ಪ್ರೊ ಕಬಡ್ಡಿ ಇತಿಹಾಸದ ದುಬಾರಿ ಆಟಗಾರ ಎನ್ನುವ ದಾಖಲೆ ಬರೆದಿದ್ದ ಮೋನು ಗೋಯತ್, ಈ ಬಾರಿ ₹93 ಲಕ್ಷಕ್ಕೆ ಯು.ಪಿ.ಯೋಧಾ ತಂಡ ಸೇರಿದರು. ಇನ್ನು ರಿಶಾಂಕ್ ₹61 ಲಕ್ಷಕ್ಕೆ ಯು.ಪಿ.ಯೋಧಾ ಸೇರಿದರೆ, ರಾಹುಲ್ ಚೌಧರಿಯನ್ನು ₹94 ಲಕ್ಷಕ್ಕೆ ತಮಿಳ್ ತಲೈವಾಸ್ ಬಿಡ್ ಮಾಡಿತು.

ಕಳೆದ ವರ್ಷ ₹1 ಕೋಟಿಗೆ ಬಿಕರಿಯಾಗಿದ್ದ ಇರಾನ್‌ನ ಫಜೆಲ್ ಅತ್ರಾಚೆಲಿಯನ್ನು ಈ ಬಾರಿ ಹರಾಜಿಗೂ ಮೊದಲೇ ಯು ಮುಂಬಾ ಉಳಿಸಿಕೊಂಡಿತ್ತು.

Follow Us:
Download App:
  • android
  • ios