ಸಚಿನ್‌ರೊಂದಿಗೆ ತೆಗಿಸಿಕೊಂಡಿರುವ ಫೋಟೋ, ವೈರಲ್ ಆಗಿದೆ.

ಕೊಚ್ಚಿ(ಫೆ.25): ಕಣ್ಸನ್ನೆ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿರುವ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್, ಕ್ರಿಕೆಟ್ ದಿಗ್ಗಜ, ಐಎಸ್ಎಲ್‌ನ ಕೇರಳ ಬ್ಲಾಸ್ಟರ್ಸ್‌ ತಂಡದ ಸಹ ಮಾಲೀಕ ಸಚಿನ್ ತೆಂಡುಲ್ಕರ್‌ರನ್ನು ಭೇಟಿ ಮಾಡಿದ್ದಾರೆ.

ಕೊಚ್ಚಿಯಲ್ಲಿ ಶುಕ್ರವಾರ ನಡೆದಿದ್ದ ಐಎಸ್ ಎಲ್ ಫುಟ್ಬಾಲ್ ಟೂರ್ನಿಯ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ಮತ್ತು ಚೆನ್ನೈಯನ್ ಎಫ್‌ಸಿ ಪಂದ್ಯದ ವೇಳೆ ಪ್ರಿಯಾ, ಸಚಿನ್‌ರನ್ನು ಭೇಟಿಯಾಗಿದ್ದು ಸಾಮಾಜಿಕ ತಾಣಗಳಲ್ಲಿ ಫೋಟೋ ಹಾಕಿಕೊಂಡಿದ್ದಾರೆ. ಸಚಿನ್‌ರೊಂದಿಗೆ ತೆಗಿಸಿಕೊಂಡಿರುವ ಫೋಟೋ, ವೈರಲ್ ಆಗಿದೆ. ಮುಂದಿನ ದಿನಗಳಲ್ಲಿ ಪ್ರಿಯಾ, ಕೇರಳ ಬ್ಲಾಸ್ಟರ್ಸ್‌ನ ಪ್ರಚಾರ ರಾಯಭಾರಿಯಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.