ಪೃಥ್ವಿ ಶಾ 5 ಸೆಕೆಂಡ್ ಗಮನವಿಟ್ಟಿದ್ದರೆ ತಪ್ಪು ಆಗ್ತಿರ್ಲಿಲ್ಲ; BCCI

ಉದ್ದೀಪನ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದಿರುವ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ 8 ತಿಂಗಳು ನಿಷೇಧಕ್ಕೊಳಗಾಗಿದ್ದಾರೆ. ಪೃಥ್ವಿ ಶಾ ತಪ್ಪಿನಿಂದಲೇ ನಿಷೇಧಕ್ಕೊಳಗಾಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಈ ಮೂಲಕ ಡೋಪಿಂಗ್ ಟೆಸ್ಟ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

Prithvi Shaw attended at least 3 anti doping program says bcci

ಮುಂಬೈ(ಆ.03): ಡೋಪಿಂಗ್‌ ಪ್ರಕರಣದಲ್ಲಿ ಸಿಲುಕಿರುವ ಯುವ ಕ್ರಿಕೆಟಿಗ ಪೃಥ್ವಿ ಶಾ, ಉದ್ದೀಪನ ಸೇವನೆ ನಿಯಂತ್ರಣದ ಕುರಿತು ಬಿಸಿಸಿಐ ನಡೆದ ಮೂರು ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದರು ಎಂದು ಭಾರತೀಯ ಕ್ರಿಕೆಟ್‌ ಮಂಡಳಿಯ ಉದ್ದೀಪನ ಸೇವನೆ ನಿಗ್ರಹ ವ್ಯವಸ್ಥಾಪಕ ಅಭಿಜಿತ್‌ ಸಾಳ್ವೆ ತಿಳಿಸಿದ್ದಾರೆ.

ಇದನ್ನೂ ಓದಿ: ಡೋಪಿಂಗ್:  ಟೀಮ್ ಇಂಡಿಯಾದ ಆಟಗಾರನಿಗೆ 8 ತಿಂಗಳು ಗೇಟ್‌ಪಾಸ್

‘ಬಿಸಿಸಿಐ ನಿರಂತರವಾಗಿ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಲೇ ಇರುತ್ತದೆ. ಪೃಥ್ವಿ ತಾವು ಪಾಲ್ಗೊಂಡಿದ್ದ ಕಾರ್ಯಕ್ರಮಗಳಲ್ಲಿ 5 ಸೆಕೆಂಡ್‌ಗಳ ಕಾಲ ಗಮನವಿಟ್ಟು ಕೇಳಿದ್ದರೆ ಅವರಿಂದ ಈ ತಪ್ಪು ಆಗುತ್ತಿರಲಿಲ್ಲ’ ಎಂದು ಮುಂಬೈನ ಯುವ ಆಟಗಾರನ ವರ್ತನೆ ಬಗ್ಗೆ ಸಾಳ್ವೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಿಳಿಯದೇ ತಪ್ಪಾಗಿದೆ; ಬಿಸಿಸಿಐ ನಿರ್ಧಾರವನ್ನು ಗೌರವಿಸುತ್ತೇನೆ: ಪೃಥ್ವಿ ಶಾ

‘ಆಟಗಾರರಿಗೆ ಯಾವುದೇ ಔಷಧಿ ಸೇವಿಸಬೇಕಿದ್ದರೂ ನಮ್ಮನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ತಿಳಿಸಿದ್ದೇವೆ. ಬಿಸಿಸಿಐ 24/7 ಸಹಾಯವಾಣಿ ಸಹ ಹೊಂದಿದ್ದು, ಸ್ವತಃ ನಾವೇ ಕರೆ ಸ್ವೀಕರಿಸಿ ಆಟಗಾರರ ಸಂದೇಹಗಳಿಗೆ ಪರಿಹಾರ ನೀಡುತ್ತೇನೆ. ಪ್ರತಿ ದಿನ ದೇಶದ ಮೂಲೆ ಮೂಲೆಗಳಿಂದ ವಿವಿಧ ವಯೋಮಿತಿಯ 25-30 ಆಟಗಾರ/ಆಟಗಾರ್ತಿಯರು ಕರೆ ಮಾಡುತ್ತಾರೆ.’ ಎಂದು ಅಭಿಜಿತ್‌ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios