ಲಾರ್ಡ್ಸ್ ಮೈದಾನದಲ್ಲಿ ಆತಿಥೇಯ ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 106 ರನ್ 5 ವಿಕೆಟ್ ಕಬಳಿಸಿ ಮಿಂಚಿದ್ದ ಟೀಂ ಇಂಡಿಯಾ ಸ್ವಿಂಗ್ ವೇಗಿ, ಇದೀಗ ವಿದಾಯ ಹೇಳಿದ್ದಾರೆ. 32 ವರ್ಷದ ವೇಗಿ ದಿಢೀರ್ ವಿದಾಯ ಹೇಳಿದ್ದೇಕೆ? ಇಲ್ಲಿದೆ. 

ಮೀರತ್(ಅ.20): ಸ್ವಿಂಗ್ ಬೌಲಿಂಗ್ ಮೂಲಕ ಟೀಂ ಇಂಡಿಯಾದಲ್ಲಿ ಮಿಂಚಿನ ಸಂಚಲನ ಮೂಡಿಸಿದ್ದ ಉತ್ತರಪ್ರದೇಶದ ವೇಗಿ ಪ್ರವೀಣ್ ಕುಮಾರ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ 13 ವರ್ಷಗಳ ಕ್ರಿಕೆಟ್ ಪಯಣಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.

Scroll to load tweet…

32 ವರ್ಷದ ಪ್ರವೀಣ್ ಕುಮಾರ್‌ಗೆ ಕಳಪೆ ಫಾರ್ಮ್‌ ಸಮಸ್ಯೆ ಕಾಡುತ್ತಿತ್ತು. 2007ರಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಪ್ರವೀಣ್ ಕುಮಾರ್,ಟೆಸ್ಟ್ ತಂಡ ಸೇರಿಕೊಂಡಿದ್ದು 2011ರಲ್ಲಿ. 2012ರಲ್ಲಿ ಟೀಂ ಇಂಡಿಯಾ ಪರ ಅಂತಿಮ ಪಂದ್ಯವಾಡಿದ ಪ್ರವೀಣ್ ಇಂಜುರಿ ಸಮಸ್ಯೆಗೆ ತುತ್ತಾದರು. ಬಳಿಕ ದೇಸಿ ಕ್ರಿಕೆಟ್‌ಗೆ ಸೀಮಿತವಾದ ಪ್ರವೀಣ್ ತಂಡಕ್ಕೆ ವಾಪಾಸ್ಸಾಗಲು ಕಠಿಣ ಹೋರಾಟ ನಡೆಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ.

ಮುಂಗೋಪದಿಂದ ಪ್ರವೀಣ್ ಕುಮಾರ್ ಹಲವು ವಿವಾದಕ್ಕೂ ಕಾರಣವಾಗಿದ್ದರು. ಭಾರತದ ಪರ 6 ಟೆಸ್ಟ್ , 68 ಏಕದಿನ ಹಾಗೂ 10 ಟಿ20 ಪಂದ್ಯ ಆಡಿರುವ ಪ್ರವೀಣ್ ಕುಮಾರ್ ಇದೀಗ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.