6ನೇ ಯೂತ್‌ ಗೇಮ್ಸ್‌ಗೆ ಪ್ರಧಾನಿ ಮೋದಿ ಚಾಲನೆ

ಕ್ರೀಡಾಕೂಟದಲ್ಲಿ ದೇಶದೆಲ್ಲೆಡೆಯ 5500+ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಜ.31ರ ವರೆಗೆ ಕೂಟ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

PM Narendra Modi declares open Khelo India Youth Games in Chennai kvn

ಚೆನ್ನೈ(ಜ.20): 6ನೇ ಆವೃತ್ತಿ ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಚಾಲನೆ ನೀಡಿದರು. ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದೀಪ ಬೆಳಗುವ ಮೂಲಕ ಕೂಟವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘2024ನ್ನು ಯುವ ಅಥ್ಲೀಟ್‌ಗಳ ಕ್ರೀಡಾಕೂಟದೊಂದಿಗೆ ಆರಂಭಿಸುತ್ತಿರುವುದು ಖುಷಿಯ ಸಂಗತಿ. ಇದು ಯುವ ಜನತೆಗೆ ಕೌಶಲ್ಯ, ಸಾಮರ್ಥ್ಯ ಸಾಬೀತುಪಡಿಸಲು ವೇದಿಕೆ ಒದಗಿಸಲಿದೆ. ಮುಂಬರುವ ದಿನಗಳಲ್ಲಿ ಕ್ರೀಡಾ ಕ್ಷೇತ್ರವು ₹1 ಲಕ್ಷ ಕೋಟಿಯಷ್ಟು ಬೃಹತ್ತಾಗಿ ಬೆಳಯಲಿದೆ ಎಂದು ಹೇಳಿದರು.

Ranji Trophy: ಗೋವಾ ಮೇಲೆ ಕರ್ನಾಟಕ ಪ್ರಾಬಲ್ಯ

ಕ್ರೀಡಾಕೂಟದಲ್ಲಿ ದೇಶದೆಲ್ಲೆಡೆಯ 5500+ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಜ.31ರ ವರೆಗೆ ಕೂಟ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಡಕಾರ್ ರ‍್ಯಾಲಿ 2 ಕ್ಲಾಸ್ ಗೆದ್ದ ಭಾರತದ ಹರಿತ್

ಯಾನ್ಬು: ವಿಶ್ವದ ಅತ್ಯಂತ ಅಪಾಯಕಾರಿ ಮೋಟರ್ ಸೈಕಲ್ ರೇಸ್‌ ಆಗಿರುವ ಡಕಾರ್ ರ‍್ಯಾಲಿಯ ಕ್ಲಾಸ್ 2ರಲ್ಲಿ ಭಾರತದ ಹರಿತ್ ನೋಹ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಹರಿತ್ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದು, ಒಟ್ಟಾರೆ ಡಕಾರ್ ರ‍್ಯಾಲಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ.

IPL 2024 ಟೂರ್ನಿಗೂ ಮುನ್ನ ಗುಡುಗಿದ RCB ಕ್ರಿಕೆಟಿಗ, ಕೇವಲ 42 ಎಸೆತದಲ್ಲಿ ಶತಕ..! ಬೌಂಡ್ರಿ-ಸಿಕ್ಸರ್ ವಿಡಿಯೋ ವೈರಲ್

ಸೌದಿ ಅರೇಬಿಯಾದ ಯನ್ಬು ಎಂಬಲ್ಲಿ ನಡೆದ ರೇಸ್‌ನಲ್ಲಿ ಟಿವಿಎಸ್ ರ‍್ಯಾಲಿ ಫ್ಯಾಕ್ಟರ್ ರೈಡರ್ ಹರಿತ್. 2 ಕ್ಲಾಸ್‌ನ ಕೊನೆ ಹಂತದಲ್ಲಿ 5ನೇ ಸ್ಥಾನಿಯಾದರು. ಒಟ್ಟಾರೆ ಕ್ಲಾಸ್‌ 2ರಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡರು. ಇದರೊಂದಿಗೆ ಡಕಾರ್ ರ‍್ಯಾಲಿ ಪೂರ್ಣಗೊಳಿಸಿದ ಮೊದಲ ಭಾರತೀಯ ತಯಾರಕ ಕಂಪನಿಯಾಗಿ ಹೀರೋ ಸ್ಪೋರ್ಟ್ಸ್‌ ಹೊರಹೊಮ್ಮಿದೆ.

Pro Kabaddi League: ಟೈಟಾನ್ಸ್‌ಗೆ ಗುದ್ದಿದ ಬುಲ್ಸ್‌

ಹೈದರಾಬಾದ್‌: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ 6ನೇ ಗೆಲುವು ದಾಖಲಿಸಿದೆ. ಶುಕ್ರವಾರ ತೆಲುಗು ಟೈಟಾನ್ಸ್‌ ವಿರುದ್ಧದ ಮಹತ್ವದ ಪಂದ್ಯದಲ್ಲಿ ಬುಲ್ಸ್‌ಗೆ 42-26 ಅಂಕಗಳ ಜಯ ಲಭಿಸಿತು. ಇದರೊಂದಿಗೆ 14 ಪಂದ್ಯಗಳಲ್ಲಿ ಒಟ್ಟು 37 ಅಂಕ ಸಂಪಾದಿಸಿರುವ ಬುಲ್ಸ್‌, ಪ್ಲೇ-ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಟೈಟಾನ್ಸ್‌ 13 ಪಂದ್ಯಗಳಲ್ಲಿ 12ನೇ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ.

ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಬುಲ್ಸ್‌ ಮೊದಲಾರ್ಧಕ್ಕೆ 9-12 ಅಂಕಗಳಿಂದ ಹಿಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪುಟಿದೆದ್ದ ಬುಲ್ಸ್‌ ಸತತ ಅಂಕ ಸಂಪಾದಿಸಿ ಗೆಲುವಿನತ್ತ ಮುನ್ನಡೆಯಿತು. ತಾರಾ ರೈಡರ್‌ಗಳು ಕೈಕೊಟ್ಟರೂ, ಡಿಫೆನ್ಸ್‌ನಲ್ಲಿ ನೀಡಿದ ಉತ್ತಮ ಪ್ರದರ್ಶನ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿತು. ಅಕ್ಷಿತ್‌ 9 ರೈಡ್‌ ಅಂಕ, ಸುರ್ಜೀತ್‌ 7 ಟ್ಯಾಕಲ್‌ ಅಂಕ ಸಂಪಾದಿಸಿದರು.

ಶುಕ್ರವಾರದ ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್‌ ವಿರುದ್ಧ ಪಾಟ್ನಾ ಪೈರೇಟ್ಸ್‌ 000 ಗೆಲುವು ಸಾಧಿಸಿತು.

ಇಂದಿನ ಪಂದ್ಯಗಳು

ದಬಾಂಗ್‌ ಡೆಲ್ಲಿ-ಯು ಮುಂಬಾ, ರಾತ್ರಿ 8ಕ್ಕೆ

ತೆಲುಗು ಟೈಟಾನ್ಸ್‌-ಯೋಧಾಸ್‌, ರಾತ್ರಿ 9ಕ್ಕೆ

Latest Videos
Follow Us:
Download App:
  • android
  • ios