ಅಮೃತ್'ರಾಜ್ 2013ರಿಂದ ಡೇವಿಸ್ ಕಪ್ ತಂಡದ ‘ಆಡದ ನಾಯಕ’ರಾಗಿ ನೇಮಕಗೊಂಡಿದ್ದಾರೆ.

ನವದೆಹಲಿ(ಡಿ.04): ಭಾರತೀಯ ಟೆನಿಸ್ ಸಂಸ್ಥೆಯ (ಎಐಟಿಎ) ಅವಕೃಪೆಗೊಳಗಾಗಿ ಪದಚ್ಯುತಿ ಭೀತಿಯಲ್ಲಿರುವ ಭಾರತದ ಡೇವಿಸ್ ಕಪ್ ತಂಡದ ‘ಆಡದ ನಾಯಕ’ ಆನಂದ್ ಅಮೃತ್‌ರಾಜ್ ಅವರಿಗೆ ತಂಡದ ಆಟಗಾರರು ಬೆಂಬಲಕ್ಕೆ ನಿಂತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಎಐಟಿಎ ವ್ಯವಸ್ಥಾಪಕ ಮಂಡಳಿಗೆ ಪತ್ರ ಬರೆದಿರುವ ಆಟಗಾರರು, ಆನಂದ್ ಅಥವಾ ಕೋಚ್ ಜೀಶಾನ್ ಅಲಿಯವರ ಒಪ್ಪಂದವನ್ನು ರದ್ದುಗೊಳಿಸುವುದನ್ನು ತಾವು ವಿರೋಧಿಸುತ್ತೇವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಯುವ ಆಟಗಾರರಾದ ಯೂಕಿ ಬಾಬ್ರಿ, ಸಾಕೇತ್ ಮೈನೇನಿ, ರಾಮ್'ಕುಮಾರ್ ರಮಾನಾಥನ್ ಮತ್ತು ಸೋಮ್'ದೇವ್ ದೇವ್'ವರ್ಮನ್ ಅಮೃತ್'ರಾಜ್ ಪರ ಧ್ವನಿ ಎತ್ತಿದ್ದಾರೆ.

ತಂಡದ ಡ್ರೆಸ್ಸಿಂಗ್ ಕೋಣೆಯನ್ನು ಅಶಿಸ್ತಿನ ತಾಣವನ್ನಾಗಿಸಿದ್ದಾರೆಂದು ಆರೋಪಿಸಿ ಆನಂದ್ ಅವರ ಒಪ್ಪಂದ ಮುಂದುವರಿಸದಿರಲು ಎಐಟಿಎ ಚಿಂತನೆ ನಡೆಸಿದ್ದಾಗಿ ಶನಿವಾರ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಅಮೃತ್'ರಾಜ್ 2013ರಿಂದ ಡೇವಿಸ್ ಕಪ್ ತಂಡದ ‘ಆಡದ ನಾಯಕ’ರಾಗಿ ನೇಮಕಗೊಂಡಿದ್ದಾರೆ.