ಪ್ರೊ ಕಬಡ್ಡಿ: ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಟೈಟಾನ್ಸ್
ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ನೂತನ ದಾಖಲೆ ನಿರ್ಮಾಣವಾಗಿದೆ. ಪುಣೇರಿ ಪಲ್ಟಾನ್-ತೆಲುಗು ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಬರೋಬ್ಬರಿ 103 ಅಂಕಗಳು ದಾಖಲಾಗಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಪಂಚಕುಲಾ(ಅ.04): ಪ್ರೊ ಕಬಡ್ಡಿ ಇತಿಹಾಸದಲ್ಲಿಯೇ ಗುರುವಾರದ ತೆಲುಗು ಟೈಟಾನ್ಸ್ ಹಾಗೂ ಪುಣೇರಿ ಪಲ್ಟನ್ ನಡುವಿನ ಪಂದ್ಯ ಭಾರೀ ದಾಖಲೆ ಬರೆಯಿತು. ಪಂದ್ಯವೊಂದರಲ್ಲೇ ಒಟ್ಟಾರೆ 103 ಅಂಕಗಳು ದಾಖಲಾದವು. ಪಾಟ್ನಾ ಪೈರೇಟ್ಸ್ ಹಾಗೂ ದಬಾಂಗ್ ಡೆಲ್ಲಿ ನಡುವಿನ ಪಂದ್ಯದಲ್ಲಿ 101 ಅಂಕ ದಾಖಲಾಗಿದ್ದು, ಈವರೆಗಿನ ದಾಖಲೆಯಾಗಿತ್ತು.
KSCA ಚುನಾವಣೆ ಫಲಿತಾಂಶ; ರೋಜರ್ ಬಿನ್ನಿ ಬಣಕ್ಕೆ ಭರ್ಜರಿ ಗೆಲುವು
ಹೋರಾಡಿ ಸೋತ ತೆಲುಗು ಟೈಟಾನ್ಸ್: ಪ್ರೊ ಕಬಡ್ಡಿ 7ನೇ ಆವೃತ್ತಿ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿತು. ಗುರುವಾರ ನಡೆದ ಪಂದ್ಯದಲ್ಲಿ ಪುಣೆ 53-50ರಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು. ಈಗಾಗಲೇ ಹೊರಬಿದ್ದ ಪುಣೇರಿ ಈ ಆವೃತ್ತಿಯಲ್ಲಿ 7ನೇ ಜಯ ಸಾಧಿಸಿದರೆ, ಟೈಟಾನ್ಸ್ ತಂಡ 11ನೇ ಸೋಲುಂಡಿತು. ಮೊದಲಾರ್ಧದಲ್ಲಿ 31-16ರಲ್ಲಿ ಪುಣೇರಿ ಮುಂದಿತ್ತು.
ಹರ್ಯಾಣ ಮಣಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದ ಬೆಂಗಳೂರು ಬುಲ್ಸ್!
ಒಂದು ಪಂದ್ಯ ಗೆದ್ದರೆ ಪ್ಲೇ ಆಫ್‌ಗೆ ಯೋಧಾ
ಗ್ರೇಟರ್ ನೋಯ್ಡಾ: ಯು.ಪಿ. ಯೋಧಾ ಇನ್ನೊಂದು ಪಂದ್ಯ ಗೆದ್ದರೆ ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಸತತ 3ನೇ ಬಾರಿಗೆ ಪ್ಲೇ ಆಫ್‌ಗೇರಲಿದೆ.
ಶನಿವಾರ ಯೋಧಾ ತವರಿನ ಚರಣ ಆರಂಭವಾಗಲಿದ್ದು, ಮೊದಲ ಪಂದ್ಯವನ್ನೇ ಗೆದ್ದು ಪ್ಲೇ ಆಫ್ ಸೇರುವ ಗುರಿ ಯೋಧಾ ಹೊಂದಿದೆ. ಆರಂಭಿಕ ಹಂತದಲ್ಲಿ ಲಯ ಕಂಡುಕೊಳ್ಳದ ಯೋಧಾ, ಆ ಬಳಿಕ ಸತತ 10 ಜಯ ಸಾಧಿಸಿತು.