PKL 2019 ತೆಲುಗು ಟೈಟಾನ್ಸ್ ಗೆ 6ನೇ ಸೋಲು
ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ದಬಾಂಗ್ ಡೆಲ್ಲಿ ತವರಿನ ಅಭಿಯಾನವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನವದೆಹಲಿ(ಆ.31): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ 6ನೇ ಸೋಲು ಕಂಡಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್, ಟೈಟಾನ್ಸ್ ವಿರುದ್ಧ 34-27 ಅಂಕಗಳಲ್ಲಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೈಟಾನ್ಸ್ ತಂಡವನ್ನು ಹಿಂದಿಕ್ಕಿದ ಪಲ್ಟಾನ್ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದೆ.
ಮೊದಲಾರ್ಧದಲ್ಲಿ ಪುಣೆ 17-14 ರಿಂದ ಟೈಟಾನ್ಸ್ ಎದುರು ಅಲ್ಪ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ರೈಡಿಂಗ್ ಮತ್ತು ಡಿಫೆನ್ಸ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಪುಣೆ ತಂಡ, ಟೈಟಾನ್ಸ್ ಎದುರು 7 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಮಂಜೀತ್ (8 ರೈಡ್ ಅಂಕ), ನಿತಿನ್ ತೋಮರ್ (7 ರೈಡ್ ಅಂಕ) ಪುಣೆ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಟೈಟಾನ್ಸ್‌ನ ತಾರಾ ರೈಡರ್ ಸಿದ್ಧಾರ್ಥ್ ಮತ್ತೊಮ್ಮೆ ವೈಫಲ್ಯ ಕಂಡರು.
PKL7: ಬೆಂಗ್ಳೂರಿಗೆ ಬಂತು ಕಬಡ್ಡಿ; ಕನ್ನಡದಲ್ಲೇ ರೋಹಿತ್ ಆಹ್ವಾನ!
ಡೆಲ್ಲಿಗೆ ಸತತ 4ನೇ ಜಯ
ಒಂದೆಡೆ ದಬಾಂಗ್ ಡೆಲ್ಲಿ ಸತತ 4ನೇ ಜಯ ಸಾಧಿಸಿದರೆ, ಇನ್ನೊಂದೆಡೆ ಪಾಟ್ನಾ ಪೈರೇಟ್ಸ್ ಸತತ 4ನೇ ಸೋಲುಂಡಿತು. ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಡೆಲ್ಲಿ, ಪಾಟ್ನಾ ವಿರುದ್ಧ 38-35ರಲ್ಲಿ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ತವರಿನ ಚರಣದಲ್ಲಿ ಶೇ.100 ಗೆಲುವು ಸಾಧಿಸಿತು.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ಮೊದಲಾರ್ಧ ಡೆಲ್ಲಿ 26-17ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ನವೀನ್ ಕುಮಾರ್ (15 ಅಂಕ) ಶ್ರೇಷ್ಠ ರೈಡರ್, ರವೀಂದರ್ ಪೆಹಲ್ (4 ಅಂಕ) ಶ್ರೇಷ್ಠ ಡಿಫೆಂಡರ್ ಆದರು. ತಾರಾ ರೈಡರ್ ಪ್ರದೀಪ್ ನರ್ವಾಲ್ (18 ಅಂಕ) ಹೋರಾಟ ವ್ಯರ್ಥವಾಯಿತು.