PKL7: ಬೆಂಗ್ಳೂರಿಗೆ ಬಂತು ಕಬಡ್ಡಿ; ಕನ್ನಡದಲ್ಲೇ ರೋಹಿತ್ ಆಹ್ವಾನ!
ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ಆಗಸ್ಟ್ 31 ರಿಂದ ತವರಿನ ಚರಣ ಆರಂಭವಾಗುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಬುಲ್ಸ್ ನಾಯಕ ರೋಹಿತ್ ಶರ್ಮಾ ಸುವರ್ಣನ್ಯೂಸ್.ಕಾಂ ಜೊತೆ ಮಾತನಾಡಿದರು. ಕನ್ನಡದಲ್ಲೇ ಮಾತು ಆರಂಭಿಸಿದ ರೋಹಿತ್, ತವರಿನ ಅಭಿಮಾನಿಗಳ ಬೆಂಬಲ ಅತೀ ಮುಖ್ಯ ಎಂದಿದ್ದಾರೆ.
ಬೆಂಗಳೂರು(ಆ.30): ಪ್ರೊ ಕಬಡ್ಡಿ ಲೀಗ್ ಟೂರ್ನಿ ಇದೀಗ ಬೆಂಗಳೂರಿಗೆ ಕಾಲಿಟ್ಟಿದೆ. ಆ.31 ರಿಂದ ಬೆಂಗಳೂರು ಬುಲ್ಸ್ ತಂಡದ ತವರಿನ ಚರಣ ಆರಂಭವಾಗಲಿದೆ. ಕಳೆದೆರಡು ವರ್ಷ ಬೆಂಗಳೂರು ಬುಲ್ಸ್, ನಾಗ್ಪುರ ಹಾಗೂ ಪುಣೆ ತವರು ನೆಲವನ್ನಾಗಿ ಮಾಡಿತ್ತು. ಇದೀಗ ಮತ್ತೆ ತವರಿಗೆ ವಾಪಾಸ್ಸಾಗಿದೆ. ಉದ್ಯಾನ ನಗರಿಯಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಬುಲ್ಸ್ ತಂಡ ಸುವರ್ಣನ್ಯೂಸ್.ಕಾಂ ಜೊತೆ ಮಾತನಾಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಮತ್ತೆ ತವರಿನಲ್ಲಿ ಆಡುತ್ತಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಕಳೆದೆರಡು ಆವೃತ್ತಿಗಳಲ್ಲಿ ಬೆಂಗಳೂರು ಅಭಿಮಾನಿಗಳ ಬೆಂಬಲವನ್ನು ಮಿಸ್ ಮಾಡಿಕೊಂಡಿದ್ದೇವು. ಆದರೆ ಈ ಬಾರಿ ತವರಿನ ಬೆಂಬಲ ನಮಗೆ ಸಿಗಲಿದೆ. ಇದು ನಮಗೆ ಸಹಕಾರಿಯಾಗಲಿದೆ ಎಂದು ಬೆಂಗಳೂರು ಬುಲ್ಸ್ ತಂಡದ ನಾಯಕ ರೋಹಿತ್ ಕುಮಾರ್ ಹೇಳಿದರು. ವಿಶೇಷ ಅಂದರೆ ಕನ್ನಡದಲ್ಲೇ ಮಾತನಾಡಿದ ರೋಹಿತ್ ಕುಮಾರ್, ಕನ್ನಡಿಗರನ್ನು ಪಂದ್ಯ ವೀಕ್ಷಿಸಲು ಆಹ್ವಾನಿಸಿದರು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ಕಳೆದೆರಡು ವರ್ಷ ಬೆಂಗಳೂರಿನಿಂದ ಹೊರಗಿದ್ದ ಕಾರಣ ಕೆಲ ಕನ್ನಡ ಪದಗಳು ಮರೆತುಹೋಗಿದೆ. ಆದರೂ ಬೆಂಗಳೂರು ಬುಲ್ಸ್‌ಗೆ ಸಪೂರ್ಟ್ ಮಾಡಿ, ಬನ್ನಿ ಮ್ಯಾಚ್ ನೋಡಿ ಎಂದು ಕನ್ನಡದಲ್ಲೇ ರೋಹಿತ್ ಮಾತನಾಡಿ ಎಲ್ಲರಿಗೆ ಅಚ್ಚರಿ ನೀಡಿದರು. ಈ ಬಾರಿ ಬೆಂಗಳೂರಿನಲ್ಲಿ ಆಡುತ್ತಿರುವ ಕಾರಣ ಮತ್ತೆ ಕನ್ನಡ ಕಲಿಯುತ್ತೇನೆ ಎಂದರು.
"
ತವರಿನಲ್ಲಿ ಚರಣದಿಂದ ತಂಡದ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಕೋಚ್ ರಣ್ದೀರ್ ಸಿಂಗ್ ಸ್ಪಷ್ಟಪಡಿಸಿದರು. ತವರಿನ ಅಭಿಮಾನಿಗಳ ಪ್ರೀತಿ ಇದ್ದರೆ, ಎಲ್ಲಾ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಸಂಪಾದಿಸಲಿದ್ದೇವೆ. ನಿಮ್ಮಿಂದ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. ನಿಮ್ಮ ಪ್ರೋತ್ಸಾಹ ಇದ್ದರೆ, ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದರು.
ಬೆಂಗಳೂರು ಬುಲ್ಸ್ ಸದ್ಯ 11 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 5 ರಲ್ಲಿ ಸೋಲು ಕಂಡಿದೆ. 33 ಅಂಕದೊಂದಿಗೆ 5 ನೇ ಸ್ಥಾನದಲ್ಲಿದೆ. ತವರಿನ ಚರಣದಲ್ಲಿ ಬೆಂಗಳೂರು ಬುಲ್ಸ್, ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ ಹೋರಾಟ ಆರಂಭಿಸಲಿದೆ. ತವರಿನಲ್ಲಿ ಒಟ್ಟು 4 ಪಂದ್ಯ ಆಡಲಿದೆ.
ಬೆಂಗಳೂರು ಬುಲ್ಸ್ ತವರಿನ ಚರಣದ ಪಂದ್ಯ;
ಆ.31: ಬೆಂಗಳೂರು ಬುಲ್ಸ್ vs ಗುಜರಾತ್ ಫಾರ್ಚೂನ್‌ಜೈಂಟ್ಸ್
ಸೆ.01: ಬೆಂಗಳೂರು ಬುಲ್ಸ್ Vs ತಮಿಳ್ ತಲೈವಾಸ್
ಸೆ.04: ಬೆಂಗಳೂರು ಬುಲ್ಸ್ Vs ಪಾಟ್ನಾ ಪೈರೇಟ್ಸ್
ಸೆ.06: ಬೆಂಗಳೂರು ಬುಲ್ಸ್ Vs ತೆಲುಗು ಟೈಟಾನ್ಸ್
"