ಪ್ರೊ ಕಬಡ್ಡಿ 2019: ಬೆಂಗಾಲ್‌ಗೆ ತಲೆಬಾಗಿದ ಹರ್ಯಾಣ
ಪ್ಲೇ-ಆಫ್ ಹಂತ ಹತ್ತಿರುವಾಗುತ್ತಿದ್ದಂತೆ ಬೆಂಗಾಲ್ ವಾರಿಯರ್ಸ್ ಜಯದ ಲಯ ಕಾಯ್ದುಕೊಂಡಿದ್ದು, ಇದೀಗ ಹರಿಯಾಣ ಸ್ಟೀಲರ್ಸ್ ತಂಡಕ್ಕೆ ಶಾಕ್ ನೀಡಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಪುಣೆ[ಸೆ.20]: ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಗುರುವಾರ ನಡೆದ ಏಕೈಕ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ ಭರ್ಜರಿ ಜಯ ಸಾಧಿಸಿತು. ರೈಡರ್‌ಗಳ ಅಬ್ಬರಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಬೆಂಗಾಲ್ 48-36 ಅಂಕಗಳಲ್ಲಿ ಜಯಿಸಿ, 2ನೇ ಸ್ಥಾನ ಕಾಯ್ದುಕೊಂಡಿತು.
ಪ್ಲೇ-ಆಫ್ ಹಂತ ಹತ್ತಿರುವಾಗುತ್ತಿದ್ದಂತೆ ಬೆಂಗಾಲ್, ಲಯ ಕಾಯ್ದುಕೊಂಡಿದ್ದು ತಂಡಕ್ಕಿದು ಸತತ 4ನೇ ಗೆಲುವಾಗಿದೆ. 17 ಪಂದ್ಯಗಳಿಂದ 63 ಅಂಕ ಹೊಂದಿರುವ ಬೆಂಗಾಲ್, ಪೇ-ಆಫ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ.
ಪ್ರೊ ಕಬಡ್ಡಿ 2019: ಮುಂಬಾಗೆ ರೋಚಕ ಜಯ
ಎರಡೂ ತಂಡಗಳ ರೈಡರ್‌ಗಳ ನಡುವೆ ಭಾರೀ ಪೈಪೋಟಿ ಎದುರಾಯಿತು. ಬೆಂಗಾಲ್ ನಾಯಕ ಮಣೀಂದರ್ ಸಿಂಗ್ 18 ರೈಡ್ ಅಂಕ ಕಲೆಹಾಕಿದರು. ರೈಡಿಂಗ್‌ನಲ್ಲೇ ವಾರಿಯರ್ಸ್ 30 ಅಂಕ ಗಳಿಸಿತು. ಹರ್ಯಾಣ ರೈಡರ್‌ಗಳೇನು ಹಿಂದೆ ಬೀಳಲಿಲ್ಲ. ಯುವ ರೈಡರ್ ವಿನಯ್‌ರ 14 ಅಂಕಗಳ ಸಹಾಯದಿಂದ ಹರ್ಯಾಣ 29 ರೈಡ್ ಅಂಕ ಗಳಿಸಿತು. ಆದರೆ ಬೆಂಗಾಲ್‌ನ ಡಿಫೆಂಡರ್‌ಗಳು ಪಂದ್ಯದ ಗತಿ ಬದಲಿಸಿದರು. ಬೆಂಗಾಲ್ 11 ಟ್ಯಾಕಲ್ ಅಂಕ ಪಡೆದರೆ, ಹರ್ಯಾಣ ಕೇವಲ 5 ಅಂಕ ಗಳಿಸಿತು. ಜತೆಗೆ ಹರ್ಯಾಣ 3 ಬಾರಿ ಆಲೌಟ್ ಆಗಿದ್ದು, ಬೆಂಗಾಲ್ ಗೆಲುವನ್ನು ಸುಲಭಗೊಳಿಸಿತು.
ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!
ಕಳೆದ 7 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ಹರ್ಯಾಣಕ್ಕೆ ಈ ಸೋಲು ಪಾಠ ಕಲಿಸಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಸ್ಟೀಲರ್ಸ್, ಪ್ಲೇ-ಆಫ್‌ಗೇರುವ ಉತ್ಸಾಹದಲ್ಲಿದ್ದು ತನ್ನ ರಕ್ಷಣಾ ಪಡೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.
ಶ್ರೇಷ್ಠ ರೈಡರ್: ಮಣೀಂದರ್, ಬೆಂಗಾಲ್, 18 ಅಂಕ
ಶ್ರೇಷ್ಠ ಡಿಫೆಂಡರ್: ಬಲದೇವ್, ಬೆಂಗಾಲ್, 6 ಅಂಕ
ಇಂದಿನ ಪಂದ್ಯಗಳು:
ಟೈಟಾನ್ಸ್-ಪಾಟ್ನಾ, ಸಂಜೆ 7.30ಕ್ಕೆ
ಪುಣೇರಿ-ಬೆಂಗಳೂರು, ರಾತ್ರಿ 8.30ಕ್ಕೆ