ಟೀಂ ಇಂಡಿಯಾ ಕೋಚ್ ಹುದ್ದೆ ಸಂದರ್ಶನ ನಡೆಯುತ್ತಿದೆ. ಸುಮಾರು 2000 ಹೆಚ್ಚು ಅರ್ಜಿಗಳಲ್ಲಿ 6 ಮಂದಿಯನ್ನು ಅಂತಿಮಗೊಳಿಸಿ ಸಂದರ್ಶನ ನಡೆಸುತ್ತಿದೆ. ಆದರೆ ಸಂದರ್ಶನಕ್ಕೂ ಮೊದಲು ಫಿಲ್ ಸಿಮೋನ್ಸ್ ಕೋಚ್ ರೇಸ್‌ನಿಂದ ಹಿಂದೆ ಸರಿದಿದ್ದಾರೆ.
ಮುಂಬೈ(ಆ.16): ಟೀಂ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದರೆ, ಇತ್ತ ಬಿಸಿಸಿಐ ಕೋಚ್ ಆಯ್ಕೆಗೆ ಕಸರತ್ತು ನಡೆಸುತ್ತಿದೆ. ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಆರ್ಜಿ ಆಹ್ವಾನಿಸಿದ್ದ ಬಿಸಿಸಿಐ ಇಂದು ಸಂದರ್ಶನದ ಮೂಲಕ ಕೋಚ್ ಆಯ್ಕೆ ಮಾಡಲಿದೆ. ಸರಿಸುಮಾರು 2500 ಅರ್ಜಿಗಳಲ್ಲಿ 6 ಮಂದಿಯನ್ನು ಅಂತಿಮಗೊಳಿಸಿ ಸಂದರ್ಶನಕ್ಕೆ ಕರೆದಿದೆ. ಇದೀಗ ಸಂದರ್ಶನಕ್ಕೆ ಕರೆದವರ ಪೈಕಿ ಅಫ್ಘಾನಿಸ್ತಾನ ಮಾಜಿ ಕೋಚ್, ವಿಂಡೀಸ್ ಮಾಜಿ ಕ್ರಿಕೆಟಿಗ ಫಿಲ್ ಸಿಮೋನ್ಸ್ ಹಿಂದೆ ಸರಿದಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಕೋಚ್ ರೇಸ್‌ನಲ್ಲಿರುವ 6 ಮಂದಿಯ ಕಿರುಪರಿಚಯ
ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಇಂದು(ಆ.16) ಕೋಚ್ ಸಂದರ್ಶನ ನಡೆಸಲಿದೆ. ಸಂದರ್ಶನಕ್ಕೂ ಮುನ್ನ ಫಿಲ್ ಸಿಮೋನ್ಸ್ ವೈಯುಕ್ತಿ ಕಾರಣದಿಂದ ಟೀಂ ಇಂಡಿಯಾ ಮುಖ್ಯ ಕೋಚ್ ರೇಸ್‌ನಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದಾರೆ. 2016ರಲ್ಲಿ ವೆಸ್ಟ್ ಇಂಡೀಸ್ ತಂಡದ ಮಾರ್ಗದರ್ಶಕರಾಗಿದ್ದ ಸಿಮೋನ್ಸ್ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. 2017 ಸಿಮೋನ್ಸ್ ಅಫ್ಘಾನಿಸ್ತಾನ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಸ್ವಿನ್ ಮಾಂತ್ರಿಕ ಶೇನ್ ವಾರ್ನ್‌ಗೆ ಕೋಚ್ ಪಟ್ಟ!
ಸದ್ಯ ರೇಸ್‌ನಲ್ಲಿರುವ ಐವರ ಪೈಕಿ ಹಾಲಿ ಕೋಚ್ ರವಿ ಶಾಸ್ತ್ರಿ ಹಾಗೂ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಸಂದರ್ಶನವನ್ನು ಸ್ಕೈಪ್ ಮೂಲಕ ನಡೆಸಲಿದೆ. ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತ ರಂಗಸ್ವಾಮಿ ಕೋಚ್ ಸಂದರ್ಶನವನ್ನು ನಡೆಸಲಿದ್ದಾರೆ.
