'ಬಿ' ವಲಯದಲ್ಲಿ ಮೂರು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ರೋಹಿತ್ ಪಡೆ ಅಗ್ರಸ್ಥಾನಕ್ಕೇರಿದೆ.

ನಾಗ್ಪುರ(ಆ.09): ಅಜಯ್ ಕುಮಾರ್ ಹಾಗೂ ರೋಹಿತ್ ಕುಮಾರ್ ಅವರ ಪ್ರಭಾವಿ ರೈಡಿಂಗ್'ನ ನೆರವಿನಿಂದ ಕೊನೆಗೂ ಬೆಂಗಳೂರು ಬುಲ್ಸ್ ಪಡೆ ಜಯದ ಹಳಿಗೆ ಮರಳಿದೆ. ಅಲ್ಲದೇ 'ಬಿ' ವಲಯದಲ್ಲಿ ಮೂರು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ರೋಹಿತ್ ಪಡೆ ಅಗ್ರಸ್ಥಾನಕ್ಕೇರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಮಂಕಾಪುರ್ ಒಳಾಂಗಣ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಎದುರು ಬೆಂಗಳೂರು ಬುಲ್ಸ್ 21-35 ಅಂಕಗಳಿಂದ ಜಯಭೇರಿ ಬಾರಿಸಿದೆ. ಈ ಮೂಲಕ ರೋಹಿತ್ ಕುಮಾರ್ ನೇತೃತ್ವದ ಬುಲ್ಸ್ ಪಡೆ ಎರಡು ಸೋಲು ಹಾಗೂ ಒಂದು ಡ್ರಾ ಬಳಿಕ ಮತ್ತೆ ಗೆಲುವಿನ ಸಿಹಿಯುಂಡಿದೆ.

ಮೊದಲಾರ್ಧದ ಆರಂಭದಲ್ಲೇ ರೋಹಿತ್ ಕುಮಾರ್ ಎರಡು ಅಂಕ ತಂಡ ತಂದುಕೊಡುವ ಮೂಲಕ ಬುಲ್ಸ್ ಖಾತೆ ಆರಂಭಿಸಿದರು. ಇನ್ನು ಮೂರನೇ ನಿಮಿಷದಲ್ಲಿ ಮಣೀಂದರ್ ಸಿಂಗ್ ಬೆಂಗಾಲ್ ವಾರಿಯರ್ಸ್'ಗೆ ಎರಡು ಅಂಕ ತಂದಿತ್ತರು. ಮೊದಲ 10 ನಿಮಿಷಗಳಲ್ಲಿ ಉಭಯ ತಂಡಗಳು 5-5 ಅಂಕಗಳ ಸಮಬಲ ಸಾಧಿಸಿದ್ದವು. ಆ ಬಳಿಕವೂ ಅದೇ ಹೋರಾಟ ನಡೆಸಿದ ಎರಡೂ ತಂಡಗಳು 15ನೇ ನಿಮಿಷದಲ್ಲಿ 9-9 ಅಂಕಗಳ ಸಮಬಲ ಕಾಯ್ದುಕೊಂಡಿದ್ದವು.ಮೊದಲಾರ್ಧ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ 12-10 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು.

ಕೇವಲ 2 ಅಂಕಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬುಲ್ಸ್ ಪಡೆ ಆಕ್ರಮಣಾರಿಯಾಟಕ್ಕೆ ಮುಂದಾಯಿತು. ಉತ್ತರಾರ್ಧದಲ್ಲಿ ರೋಹಿತ್ ಕುಮಾರ್ ಹಾಗೂ ಅಜಯ್ ಕುಮಾರ್ ಅವರ ಸೂಪರ್ ರೈಡಿಂಗ್'ಗಳ ನೆರವಿನಿಂದ 30 ನಿಮಿಷದಲ್ಲಿ ಬುಲ್ಸ್ ಪಡೆ 5 ಅಂಕಗಳ ಮುನ್ನಡೆ ಕಾಯ್ದುಕೊಂಡಿತು. ಆ ಬಳಿಕವೂ ಮುನ್ನಡೆ ಕಾಯ್ದುಕೊಂಡ ರೋಹಿತ್ ಪಡೆ ಅಂತಿಮವಾಗಿ 31-25 ಅಂತರದಲ್ಲಿ ಜಯಭೇರಿ ಬಾರಿಸಿತು.