ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಮಲಸಹೋದರಿ ಅಮರ್ಜೋತ್ ಕೌರ್ ಕೂಡ ಕ್ರೀಡೆಯಲ್ಲಿ ಸಕ್ರಿಯರಾಗಿದ್ದಾರೆ. ಟೆನಿಸ್ನಿಂದ ಪ್ಯಾಡಲ್ ಕ್ರೀಡೆಗೆ ಬದಲಾದ ಇವರು, ಏಷ್ಯಾ ಪೆಸಿಫಿಕ್ ಪ್ಯಾಡೆಲ್ ಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಇವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಟೀಮ್ ಇಂಡಿಯಾದ ದಂತಕಥೆ ಕ್ರಿಕೆಟಿಗ ಯುವರಾಜ್ ಸಿಂಗ್ ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಆದ್ದರಿಂದ, ಅವರು ಐಪಿಎಲ್ನಲ್ಲಿ ಡೆಲ್ಲಿ ಆಟಗಾರರಿಗೆ ತರಬೇತಿ ನೀಡಲಿದ್ದಾರೆ. ನಿಮಗೆ ಯುವರಾಜ್ ಚೆನ್ನಾಗಿ ತಿಳಿದಿರಬಹುದು, ಆದರೆ ಅವರ ಸಹೋದರಿ ಕುರಿತು ಗೊತ್ತಾ? ಆ ಬ್ವುಟಿ ಬಗ್ಗೆ ಬಹಳ ಜನರಿಗೆ ತಿಳಿದಿಲ್ಲ. ಆಮಿ ಬುಂಡೆಲ್ ಎಂದೂ ಕರೆಯಲ್ಪಡುವ 24 ವರ್ಷದ ಕೌರ್, ಯುವರಾಜ್ ಸಿಂಗ್ ಅವರ ಮಲಸಹೋದರಿಯಾಗಿದ್ದಾರೆ. ಬನ್ನಿ ಅವರು ಯಾವ ಕ್ರೀಡೆ ಆಡುತ್ತಾರೆ? ಅವರಿಗೆ ಪಾಲೋವರ್ಸ್ ಎಷ್ಟಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
ಯಾವರವರು?
ಅಮರ್ಜೋತ್ ಕೌರ್ ಅವರ ತಾಯಿಯ ಹೆಸರು ನೀನಾ ಬುಂಡೆಲ್, ಇವರನ್ನು ಸತ್ಬೀರ್ ಕೌರ್ ಎಂದೂ ಕರೆಯುತ್ತಾರೆ. ಯುವರಾಜ್ ಸಿಂಗ್ ಅವರಂತೆಯೇ, ಅವರ ಸಹೋದರಿ ಕೂಡ ಕ್ರೀಡೆಗಳಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ ಅವರು ಕ್ರಿಕೆಟ್ ಆಡುವುದಿಲ್ಲ; ಬದಲಾಗಿ, ಅವರು ಪ್ಯಾಡಲ್ ಮತ್ತು ಪಿಕ್ಬಾಲ್ನಲ್ಲಿ ಸಕ್ರಿಯರಾಗಿದ್ದಾರೆ.
ಕೌರ್ಗೆ ಇಷ್ಟವಾದ ಕ್ರೀಡೆ ಯಾವುದು?
ಅಮರ್ಜೋತ್ ಕೌರ್ ಅವರ ಮೊದಲ ಪ್ರೀತಿ ಪ್ಯಾಡಲ್ ಅಲ್ಲ, ಟೆನಿಸ್ ಆಗಿದೆ. ಅವರು ಈ ಕ್ರೀಡೆಯಲ್ಲೂ ಭಾಗವಹಿಸಿದ್ದರು, ಆದರೆ ಗಾಯವು ಅವರ ಕನಸನ್ನು ಅಲ್ಲಿ ಕುಸಿಯುವಂತೆ ಮಾಡಿದೆ. ಇದರಿಂದಾಗಿ, ಅವರು ಈಗ ಪ್ಯಾಡಲ್ನಲ್ಲಿ ಸಕ್ರಿಯರಾಗಿದ್ದಾರೆ. ಪ್ರಸ್ತುತ, ಅವರು ಈ ಕ್ರೀಡೆಯಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ.
ಪ್ಯಾಡೆಲ್ ಕಪ್ನಲ್ಲಿ ಭಾಗಿ!
ಅಮರ್ಜೋತ್ ಕೌರ್ ಕಳೆದ ವರ್ಷ, ಅಂದರೆ 2025 ರಲ್ಲಿ ನಡೆದ ಏಷ್ಯಾ ಪೆಸಿಫಿಕ್ ಪ್ಯಾಡೆಲ್ ಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಆಕೆ ತಂದೆ ಹೇಳುವ ಪ್ರಕಾರ, ಆಕೆಗೆ ಪ್ಯಾಡೆಲ್ ಬಗ್ಗೆ ತುಂಬಾ ಒಲವಿದೆ. ಅದರಲ್ಲಿ ಯಶ ಕಾಣಲು ಅವಳು ಪ್ರತಿದಿನ ಕಠಿಣ ಅಭ್ಯಾಸ ಮಾಡುತ್ತಾಳೆ. ಅಮರ್ಜೋತ್ ಕೌರ್ ಅವರ ಅಭಿಮಾನಿಗಳು ಯಾವಾಗಲೂ ಅವರ ವಾರ್ಷಿಕ ಅಥವಾ ಮಾಸಿಕ ಆದಾಯ ಎಷ್ಟು? ಎಂದು ಕೇಳುತ್ತಾರೆ ಆದರೆ ಇಲ್ಲಿಯವರೆಗೆ, ಈ ಪ್ರಶ್ನೆಗೆ ಉತ್ತರಿಸಲಾಗಿಲ್ಲ. ಅಮರ್ಜೋತ್ ಕೌರ್ ಕೂಡ ತಮ್ಮ ಆದಾಯದ ಬಗ್ಗೆ ಎಂದಿಗೂ ಚರ್ಚಿಸಿಲ್ಲ.
ಪಾಲೋವರ್ಸ ಎಷ್ಟಿದ್ದಾರೆ?
ಅಮರ್ಜೋತ್ ಕೌರ್ ಪ್ರಸ್ತುತ ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಮ್ನಲ್ಲಿ 38.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಜನರು ಅವರನ್ನು ಮತ್ತು ಅವರ ಆಟವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಅವರು ತಮ್ಮ ಪುಟದಲ್ಲಿ 98 ಪೋಸ್ಟ್ ಹೊಂದಿದ್ದಾರೆ. ಅದರೊಂದಿಗೆ 687 ಜನರನ್ನು ಅನುಸರಿಸುತ್ತಿದ್ದಾರೆ.


