ತವರಿನ ಕೊನೆ 2 ಪಂದ್ಯಗಳ ವೇಳಾಪಟ್ಟಿ ಬದಲಿಸಲು ಬಿಸಿಸಿಐಗೆ ಪಂಜಾಬ್ ಮನವಿ

First Published 16, Mar 2018, 4:00 PM IST
PCA Requests BCCI to Tweak Fixtures of Last Two KXIP Home Games
Highlights

ಕಿಂಗ್ಸ್ XI ಪಂಜಾಬ್ ತಂಡವು ಈಗಿರುವ ವೇಳಾಪಟ್ಟಿಯಂತೆ ತವರು ಮೈದಾನದಲ್ಲಿ ಮೇ 12ರಂದು ಕೋಲ್ಕತಾ ನೈಟ್ ರೈಡರ್ಸ್ ಎದುರಿಸಲಿದೆ. ಇನ್ನು ಮೇ 14ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೆದುರು ಸೆಣಸಲಿದೆ.

ಕಿಂಗ್ಸ್ XI ಪಂಜಾಬ್ ತವರು ಮೈದಾನದಲ್ಲಿ ಮೇ 12 ಹಾಗೂ 14ರಂದು ನಡೆಯಲಿರುವ ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಪಂಜಾಬ್ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಮನವಿ ಮಾಡಿಕೊಂಡಿದೆ.

ಚಂಢೀಘಡ ವಿಮಾನ ನಿಲ್ದಾಣದ ನಿರ್ವಹಣಾ ಕಾರ್ಯವು ಮೇ 12ರಿಂದ 31ರವರೆಗೆ ನಡೆಯಲಿದ್ದು, ಈ ವೇಳೆ ಏರ್'ಪೋರ್ಟ್ ಬಂದ್ ಆಗುವ ಸಾಧ್ಯತೆಯಿದೆ, ಹೀಗಾಗಿ ಪಂಜಾಬ್ ಕ್ರಿಕೆಟ್ ಸಂಸ್ಥೆ(ಪಿಸಿಎ) ಐಪಿಎಲ್ ಟೂರ್ನಿಯಲ್ಲಿ ಈ 2 ಪಂದ್ಯಗಳ ವೇಳಾಪಟ್ಟಿಯನ್ನು ಬದಲಿಸುವಂತೆ ಮನವಿ ಮಾಡಿಕೊಂಡಿದೆ. ನಾವು ಪಿಸಿಎನಿಂದ ಮನವಿಯನ್ನು ಸ್ವೀಕರಿಸಿದ್ದೇವೆ. ನೈಜ ಸಮಸ್ಯೆಯಾಗಿರುವುದರಿಂದ ಐಪಿಎಲ್ ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸಲಿದೆ ಎಂದು ಬಿಸಿಸಿಐ ಕಾರ್ಯನಿರ್ವಾಹಕ ಅಧ್ಯಕ್ಷ ಸಿ.ಕೆ. ಖನ್ನಾ ತಿಳಿಸಿದ್ದಾರೆ.

ಕಿಂಗ್ಸ್ XI ಪಂಜಾಬ್ ತಂಡವು ಈಗಿರುವ ವೇಳಾಪಟ್ಟಿಯಂತೆ ತವರು ಮೈದಾನದಲ್ಲಿ ಮೇ 12ರಂದು ಕೋಲ್ಕತಾ ನೈಟ್ ರೈಡರ್ಸ್ ಎದುರಿಸಲಿದೆ. ಇನ್ನು ಮೇ 14ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೆದುರು ಸೆಣಸಲಿದೆ.

loader