ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಸೆಮೀಸ್‌ನಲ್ಲಿ ಬೆಂಗಳೂರು ತಂಡ, ಅವಧ್‌ ವಾರಿಯರ್ಸ್‌ ವಿರುದ್ಧ 4-2 ರಿಂದ ಗೆಲುವು ಸಾಧಿಸಿತು. 

ಬೆಂಗಳೂರು(ಜ): 4ನೇ ಆವೃತ್ತಿಯ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಫೈನಲ್‌ಗೆ ರ‍್ಯಾಪ್ಟರ್ಸ್ ತಂಡ ಪ್ರವೇಶಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಸೆಮೀಸ್‌ನಲ್ಲಿ ಬೆಂಗಳೂರು ತಂಡ, ಅವಧ್‌ ವಾರಿಯರ್ಸ್‌ ವಿರುದ್ಧ 4-2 ರಿಂದ ಗೆಲುವು ಸಾಧಿಸಿತು. 

ಪುರುಷರ ಡಬಲ್ಸ್‌ನ ಟ್ರಂಪ್‌ ಕಾರ್ಡ್‌ ಪಂದ್ಯದಲ್ಲಿ ಅಹಸನ್‌ ಮತ್ತು ಸೆಟಿವಾನ್‌ ಜೋಡಿ, ಲೀ ಯಾಂಗ್‌ ಹಾಗೂ ಕ್ರಿಸ್ಟಿಯಾನ್‌ ಸೆನ್‌ ಜೋಡಿ ವಿರುದ್ಧ 15-14, 15-9 ಗೇಮ್‌ಗಳಲ್ಲಿ ಜಯಿಸಿತು. ಉಳಿದಂತೆ ಪುರುಷರ ಸಿಂಗಲ್ಸ್‌ನ 2 ಪಂದ್ಯಗಳಲ್ಲಿ ಬೆಂಗಳೂರು ಗೆಲುವು ಪಡೆಯಿತು.