ಕೆನಡಾ ಓಪನ್ ಗ್ರಾಂಡ್'ಫಿಕ್ಸ್ ಜುಲೈ 11ರಿಂದ 16ರವರೆಗೆ ಜರುಗಿದರೆ, ಯುಎಸ್ ಓಪನ್ ಗ್ರಾಂಡ್'ಫಿಕ್ಸ್ ಜುಲೈ 19ರಿಂದ 23ರವರೆಗೆ ನಡೆಯಲಿದೆ.

ನವದೆಹಲಿ(ಜು.04): ಭಾರತದ ಅಗ್ರ ಶಟ್ಲರ್‌'ಗಳಾದ ಪಿ. ಕಶ್ಯಪ್, ಎಚ್.ಎಸ್. ಪ್ರಣಯ್ ಮತ್ತು ಸಿಕ್ಕಿ ರೆಡ್ಡಿ, ಮುಂಬರುವ ಕೆನಡಾ ಹಾಗೂ ಯುಎಸ್ ಬ್ಯಾಡ್ಮಿಂಟನ್ ಟೂರ್ನಿಗಳಿಗೆ ತೆರಳಲು ಪಾಸ್‌ಪೋರ್ಟ್ ಸಮಸ್ಯೆ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಸ್ಟ್ರೇಲಿಯಾ ಸೂಪರ್ ಸೀರಿಸ್‌'ನಲ್ಲಿ ಆಡಿದ್ದ ಈ ಮೂವರು ಕಳೆದ ವಾರ ನ್ಯೂಜಿಲೆಂಡ್ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಪಾಸ್‌'ಪೋರ್ಟ್‌ಗಳು ಇನ್ನೂ ಅವರ ಕೈಸೇರಿಲ್ಲ.

ಈ ಬಗ್ಗೆ ಕಶ್ಯಪ್ ಟ್ವಿಟರ್‌'ನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಕ್ರೀಡಾ ಸಚಿವ ವಿಜಯ್ ಗೋಯಲ್ ಗಮನಕ್ಕೆ ತಂದಿದ್ದು, ಕೆನಡಾದಲ್ಲಿ ನಡೆಯುವ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಲು ತಮಗಿಷ್ಟವಿಲ್ಲ ಎಂದಿದ್ದಾರೆ.

ಜುಲೈ 6ಕ್ಕೆ ಕೆನಡಾಕ್ಕೆ ಹೊರಡಬೇಕಿದ್ದು, ಆದಷ್ಟು ಬೇಗ ಪಾಸ್‌'ಪೋರ್ಟ್‌ಗಳು ನಮ್ಮ ಕೈತಲುಪುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಕೆನಡಾ ಓಪನ್ ಗ್ರಾಂಡ್'ಫಿಕ್ಸ್ ಜುಲೈ 11ರಿಂದ 16ರವರೆಗೆ ಜರುಗಿದರೆ, ಯುಎಸ್ ಓಪನ್ ಗ್ರಾಂಡ್'ಫಿಕ್ಸ್ ಜುಲೈ 19ರಿಂದ 23ರವರೆಗೆ ನಡೆಯಲಿದೆ.