ನಿನ್ನೆ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯಲ್ಲಿ ಪಾಲ್ಗೊಂಡಿದ್ರು. ಈ ವೇಳೆ ಉಳಿದ ಆಟಗಾರರು ರಾಷ್ಟ್ರಗೀತೆಯಾಡುತ್ತಿದ್ದರೆ ರಸೂಲ್​​​​ ಚೀವಿಂಗ್​​​ ಗಮ್​​ ತಿನ್ನುತ್ತಿದ್ದರು.

ಇಂಗ್ಲೆಂಡ್​​​​ ವಿರುದ್ಧ ನಿನ್ನೆ ನಡೆದ ಮೊದಲ ಟಿ20 ಪಂದ್ಯದ ವೇಳೆ ಟೀಂ ಇಂಡಿಯಾದ ಪರ್ವೆಜ್​​ ರಸೂಲ್​​ ಗಣರಾಜೋತ್ಸವದ ದಿನದಂದೆ ದೇಶದ ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ. ಚೊಚ್ಚಲ ಟಿ20 ಪಂದ್ಯವಾಡಿದ ಪರ್ವೇಜ್​​ ರಸೂಲ್,​​ ನಿನ್ನೆ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯಲ್ಲಿ ಪಾಲ್ಗೊಂಡಿದ್ರು. ಈ ವೇಳೆ ಉಳಿದ ಆಟಗಾರರು ರಾಷ್ಟ್ರಗೀತೆಯಾಡುತ್ತಿದ್ದರೆ ರಸೂಲ್​​​​ ಚೀವಿಂಗ್​​​ ಗಮ್​​ ತಿನ್ನುತ್ತಿದ್ದರು. ಇದು ಸದ್ಯ ವಿವಾದಕ್ಕೀಡಾಗಿದ್ದು, ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬಂದಿವೆ.