Asianet Suvarna News Asianet Suvarna News

ಪಾರ್ಥೀವ್ ವಿಕೆಟ್ ಕೀಪರ್ ಆಗಿ ಮುಂದುವರಿಕೆ

ಮೊಹಾಲಿ ಟೆಸ್ಟ್'ನ ಮೊದಲ ಇನಿಂಗ್ಸ್'ನಲ್ಲಿ 42 ಹಾಗೂ ಎರಡನೇ ಇನಿಂಗ್ಸ್'ನಲ್ಲಿ ಅಜೇಯ 67 ರನ್ ಬಾರಿಸಿ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಗುಜರಾತ್'ನ ಎಡಗೈ ದಾಂಡಿಗ ಯಶಸ್ವಿಯಾಗಿದ್ದರು.

Parthiv Patel to continue as keeper in Mumbai Test confirm selectors

ಮುಂಬೈ: ಇದೇ ತಿಂಗಳ 8ರಿಂದ 12ರವರೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಪಾರ್ಥೀವ್ ಪಟೇಲ್ ಅವರೇ ವಿಕೆಟ್‌'ಕೀಪರ್ ಆಗಿ ಮುಂದುವರೆಯಲಿದ್ದು, ಗಾಯಾಳು ವೃದ್ಧಿಮಾನ್ ಸಾಹಗೆ ಹೆಚ್ಚಿನ ವಿಶ್ರಾಂತಿ ನೀಡಲಾಗಿದೆ.

ಮೊಹಾಲಿ ಟೆಸ್ಟ್'ನ ಮೊದಲ ಇನಿಂಗ್ಸ್'ನಲ್ಲಿ 42 ಹಾಗೂ ಎರಡನೇ ಇನಿಂಗ್ಸ್'ನಲ್ಲಿ ಅಜೇಯ 67 ರನ್ ಬಾರಿಸಿ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಗುಜರಾತ್'ನ ಎಡಗೈ ದಾಂಡಿಗ ಯಶಸ್ವಿಯಾಗಿದ್ದರು.

ಇನ್ನು ಇದೇ ವಾರ ಹಸೆಮಣೆ ಏರಲಿರುವ ವೇಗಿ ಇಶಾಂತ್ ಶರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹಾಗಾಗಿ, ಸರಣಿಗಾಗಿ ಈ ಹಿಂದೆ ಪ್ರಕಟಿಸಲಾಗಿದ್ದ 15 ಸದಸ್ಯರುಳ್ಳ ಭಾರತ ತಂಡವು 14ಕ್ಕೆ ಇಳಿದಿದಿದೆ. ಇನ್ನು ಕರ್ನಾಟಕದ ಕೆ.ಎಲ್. ರಾಹುಲ್ ದೈಹಿಕವಾಗಿ ಫಿಟ್ನೆಸ್ ಸಾಬೀತುಪಡಿಸಿದರೆ ಅವರು ವಾಂಖೆಡೆ ಟೆಸ್ಟ್‌ನಲ್ಲಿ ಆಡಲಿದ್ದಾರೆ ಎಂದು ಭಾರತ ಕ್ರಿಕೆಟ್ ಆಯ್ಕೆಸಮಿತಿ ಅಧ್ಯಕ್ಷ ಎಂಎಸ್‌'ಕೆ ಪ್ರಸಾದ್ ಹೇಳಿದ್ದಾರೆ.

Follow Us:
Download App:
  • android
  • ios