ಟಾಪ್ ಯೋಜನೆಗೆ ಪ್ಯಾರಾ ಕ್ರೀಡಾಳುಗಳ ಸೇರ್ಪಡೆ
ಟಾರ್ಗೆಟ್ ಒಲಿಂಪಿಕ್ ಪೋಡಿಯಂ(ಟಾಪ್)ಯೋಜನೆಗೆ 12 ಪ್ಯಾರಾ ಕ್ರೀಡಾಪಟುಗಳನ್ನ ಸೇರ್ಪಡೆಗೊಳಿಸಲಾಗಿದೆ. 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್ ಗಮನಲ್ಲಿಟ್ಟು ಈ ಯೋಜನೆಗೆ ಪ್ಯಾರಾ ಕ್ರೀಡಾಪಟುಗಳನ್ನ ಸೇರಿಸಿಕೊಳ್ಳಲಾಗಿದೆ.
ನವದೆಹಲಿ(ಜ.31): ಪ್ಯಾರಾ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) 12 ಪ್ಯಾರಾ ಕ್ರೀಡಾಪಟುಗಳನ್ನು, ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ಸೇರ್ಪಡೆಗೊಳಿಸಿದೆ. ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಶೂಟಿಂಗ್, ಪ್ಯಾರಾ ಈಜು ಹಾಗೂ ಪ್ಯಾರಾ ಪವರ್‌ಲಿಫ್ಟಿಂಗ್ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಟೆನಿಸ್ ವಿಶ್ವ ರ‍್ಯಾಂಕಿಂಗ್ - ಜೋಕೋವಿಚ್‌ಗೆ ಅಗ್ರಸ್ಥಾನ
2020ರ ಟೋಕಿಯೋ ಪ್ಯಾರಾಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಯ್ ಅಧಿಕಾರಿಗಳು ತಿಳಿಸಿದ್ದಾರೆ. ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಹೈಜಂಪ್ ಪಟು ಶರದ್ ಕುಮಾರ್, ವರುಣ್ ಭಾಟಿ, ಜಾವಲಿನ್ ಥ್ರೋ ಪಟುಗಳಾದ ಸಂದೀಪ್ ಚೌಧರಿ, ಸುಮಿತ್, ಸುಂದರ್ ಸಿಂಗ್, ಪ್ಯಾರಾ ಶೂಟರ್‌ಗಳಾದ ಮನೀನ್ ನರ್ವಾಲ್, ದೀಪೇಂದರ್ ಟಾಫ್ಸ್ ಯೋಜನೆಯಡಿ ಸ್ಥಾನ ಪಡೆದಿರುವ ಪ್ರಮುಖರು.
ಇದನ್ನೂ ಓದಿ: ಇಂಡೋನೇಷ್ಯಾ ಓಪನ್ ಗೆದ್ದ ಇಂಡಿಯನ್: ಸೈನಾ ದಿ ಗ್ರೇಟ್!
ಇದಲ್ಲದೇ 8 ಪ್ಯಾರಾ ಈಜುಪಟುಗಳು, 6 ಪ್ಯಾರಾ ಪವರ್‌ಲಿಫ್ಟರ್‌ಗಳ ಮೇಲೆ ಸಾಯ್ ಕಣ್ಣಿರಿಸಿರುವುದಾಗಿ ತಿಳಿಸಿದೆ. ಮುಂಬರುವ ಪಂದ್ಯಾವಳಿಗಳಲ್ಲಿ ಇವರ ಪ್ರದರ್ಶನ ಗುಣಮಟ್ಟನೋಡಿಕೊಂಡು ಯೋಜನೆಗೆ ಸೇರಿಸುವ ಬಗ್ಗೆ ನಿರ್ಧರಿಸಲಾಗುವುದು ಎನ್ನಲಾಗಿದೆ. ಕರ್ನಾಟಕದ ಪ್ಯಾರಾ ಈಜುಪಟು ಶರತ್ ಗಾಯಕ್ವಾಡ್ ಪ್ರದರ್ಶನದ ಮೇಲೂ ಸಾಯ್ ಕಣ್ಣಿರಿಸಿದೆ.