ಜಕಾರ್ತ[ಜ.27]: ಭಾರತದ ತಾರಾ ಬ್ಯಾಡ್ಮಿಟನ್ ಪಟು ಸೈನಾ ನೆಹ್ವಾಲ್ 2019ನೇ ಸಾಲಿನ ಇಂಡೋನೇಷ್ಯಾ ಮಾಸ್ಟರ್ಸ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರಿಯೋ ಚಿನ್ನದ ಪದಕ ವಿಜೇತೆ ಸ್ಪೇನ್’ನ ಕರೋಲಿನಾ ಮರೀನ್

ಮೊಣಕಾಲು ಗಾಯಕ್ಕೆ ತುತ್ತಾಗಿ ಹೊರನಡೆದಿದ್ದರಿಂದ ಪ್ರಶಸ್ತಿ ಸೈನಾ ಪಾಲಾಗಿದೆ.
ಕರೋಲಿನಾ ಮರೀನ್ ಮೊದಲ 10 ನಿಮಿಷದಲ್ಲೇ 9-2 ಅಂಕಗಳ ಮುನ್ನಡೆ ಸಾಧಿಸಿದ್ದರು. ಈ ವೇಳೆ ಆಕ್ರಮಣಕಾರಿ ಆಟವಾಡುತ್ತಿದ್ದ ಮರೀನ್ ಮೊಣಕಾಲು ಗಾಯಕ್ಕೆ ತುತ್ತಾದರು. ಮೂರು ಬಾರಿ ವಿಶ್ವಚಾಂಪಿಯನ್ ಮರೀನ್ ಆ ಬಳಿಕ ಮತ್ತೆ ಆಡಲು ಪ್ರಯತ್ನಿಸಿದಾದರೂ ನೋವಿನ ತೀವ್ರತೆಯಿಂದಾಗಿ ಪಂದ್ಯದಿಂದ ಹಿಂದೆ ಸರಿದರು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಸೈನಾ, ಈ ವರ್ಷ ನಮ್ಮೆಲ್ಲರ ಪಾಲಿಗೆ ಮಹತ್ವದ್ದಾಗಿದೆ. ಹೀಗಾಗಬಾರದಿತ್ತು. ಮರೀನ್ ಉತ್ತಮ ಆರಂಭ ಪಡೆದಿದ್ದರು, ಆದರೆ ಈ ಘಟನೆ ದುರಾದೃಷ್ಟಕರವಾದದ್ದು ಎಂದು ಹೇಳಿದ್ದಾರೆ.