ಪ್ಯಾರಿಸ್(ಜ.29): ಆಸ್ಟ್ರೇಲಿಯಾ ಓಪನ್ ಗೆದ್ದ ಸರ್ಬಿಯಾದ ನೋವಾಕ್ ಜೋಕೋವಿಚ್ ಟೆನಿಸ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಪುರುಷರ ಎಟಿಪಿ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಜೋಕೋವಿಚ್ 10,955 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಜೋಕೋವಿಚ್ ಹಾಗೂ ನಡಾಲ್ ನಡುವೆ 2635 ಅಂಕಗಳ ಅಂತರವಿದೆ.

ಇದನ್ನೂ ಓದಿ: ರಾಫೆಲ್ ನಡಾಲ್ ಮಣಿಸಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆದ ಜೊಕೊವಿಚ್!

ಪ್ರಸಕ್ತ ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ಜೋಕೋವಿಚ್ ಎದುರು ಸೋತ ರಾಫೆಲ್ ನಡಾಲ್ 8320 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಟೆನಿಸ್ ದಿಗ್ಗಜ ರೋಜರ್ ಫೆಡರರ್ 6ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಜ್ವೆರವ್ 3ನೇ, ಡೆಲ್‌ಪೊಟ್ರೊ 4ನೇ ಮತ್ತು ರಷ್ಯಾದ ಕೆವಿನ್ ಆ್ಯಂಡರ್ಸನ್ 5ನೇ ಸ್ತಾನದಲ್ಲಿದ್ದಾರೆ.

ಇದನ್ನೂ ಓದಿ: ಇಂಡೋನೇಷ್ಯಾ ಓಪನ್ ಗೆದ್ದ ಇಂಡಿಯನ್: ಸೈನಾ ದಿ ಗ್ರೇಟ್!

ಆಸ್ಟ್ರೇಲಿಯಾ ಓಪನ್ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ವಿರುದ್ಧ 6-3, 6-2 ಹಾಗೂ 6-3 ಅಂತರದಲ್ಲಿ ಡೋಕೋವಿಚ್ ಗೆಲುವು ಸಾಧಿಸಿದರು. ಈ ಮೂಲಕ 15ನೇ ಗ್ರ್ಯಾಂಡ್ ಸ್ಲಾಂ ಗೆದ್ದ ಸಾಧನೆ ಮಾಡಿದ್ದಾರೆ. ಆದರೆ ವಿಶ್ವದ 2ನೇ ಶ್ರೇಯಾಂಕಿತ ರಾಫೆಲ್ ನಡಾಲ್ ಇದೇ ಮೊದಲ ಬಾರಿಗೆ ಸ್ಟ್ರೈಟ್ ಸೆಟ್‌ಗಳಲ್ಲಿ ಸೋಲು ಅನುಭವಿಸಿದ್ದಾರೆ.