ಸ್ಪರ್ಧೆಯಲ್ಲಿ ಒಟ್ಟು 11 ಅಥ್ಲೀಟ್‌'ಗಳು ಪಾಲ್ಗೊಂಡಿದ್ದರು. 57.61 ಮೀಟರ್ ದೂರ ಎಸೆಯುವ ಮೂಲಕ ಟ್ರಿನಿಡಾಡ್ ಅಂಡ್ ಟೊಬೆಗೊದ ಅಕೀಮ್ ಸ್ಟೀವರ್ಟ್, ವಿಶ್ವ ದಾಖಲೆ ಬರೆದು ಚಿನ್ನದ ಪದಕ ಗೆದ್ದುಕೊಂಡರು.

ಲಂಡನ್: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌'ಶಿಪ್‌ನ ಜಾವೆಲಿನ್ ಥ್ರೋನಲ್ಲಿ ಕರ್ನಾಟಕದ ಪ್ರಸನ್ನ ಕುಮಾರ್ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಎಫ್ 44 ವಿಭಾಗದಲ್ಲಿ ಕಣಕ್ಕಿಳಿದಿದ್ದ ಪ್ರಸನ್ನ, 50.09 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಸ್ಪರ್ಧೆಯಲ್ಲಿ ಒಟ್ಟು 11 ಅಥ್ಲೀಟ್‌'ಗಳು ಪಾಲ್ಗೊಂಡಿದ್ದರು. 57.61 ಮೀಟರ್ ದೂರ ಎಸೆಯುವ ಮೂಲಕ ಟ್ರಿನಿಡಾಡ್ ಅಂಡ್ ಟೊಬೆಗೊದ ಅಕೀಮ್ ಸ್ಟೀವರ್ಟ್, ವಿಶ್ವ ದಾಖಲೆ ಬರೆದು ಚಿನ್ನದ ಪದಕ ಗೆದ್ದುಕೊಂಡರು. ಭಾರತದ ಇನ್ನಿಬ್ಬರು ಅಥ್ಲೀಟ್‌ಗಳಾದ ಸಂದೀಪ್ (53.04 ಮೀ.) 5ನೇ ಹಾಗೂ ನರೇಂದರ್ (51.07 ಮೀ.) 8ನೇ ಸ್ಥಾನ ಪಡೆದರು. ಐಸ್‌'ಲೆಂಡ್‌'ನ ಸ್ವೆನ್ಸನ್ ಬೆಳ್ಳಿ ಹಾಗೂ ಕೆನಡಾದ ಅಲಿಸ್ಟೈರ್ ಕಂಚಿನ ಪದಕ ಗೆದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

epaperkannadaprabha.com