ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದನೇ ಟಿ20 ಪಂದ್ಯದಲ್ಲಿ ಕೀಮೋ ಪಾಲ್ ಮತ್ತು ಅಭಿಷೇಕ್ ಶರ್ಮಾ ನಡುವಿನ ಹಳೆಯ ವೈಷಮ್ಯ ಮುಂದುವರೆದಿದೆ. ನಾಲ್ಕನೇ ಪಂದ್ಯದಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಅಲ್ಲದೇ 5 ನೇ ಪಂದ್ಯದಲ್ಲಿ ಮುಂದುವರೆದ ಕಿತ್ತಾಟ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಮಳೆಯಿಂದಾಗಿ ಪಂದ್ಯವನ್ನು 9-9 ಓವರ್‌ಗಳಲ್ಲಿ ಆಡಲು ನಿರ್ಧರಿಸಲಾಯಿತು, ನಂತರ ವೆಸ್ಟ್ ಇಂಡೀಸ್ ನಾಯಕ ಶೈ ಹೋಪ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 7.4 ಓವರ್‌ಗಳಲ್ಲಿ 118/5 ಸ್ಕೋರ್ ಮಾಡಿತ್ತು, ಆದರೆ ನಂತರ ಮತ್ತೆ ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಇಲ್ಲಿ ನಡೆದ ಒಂದು ಕಿತ್ತಾಟ ಈಗ ಸಂಚಲನ ಸೃಷ್ಟಿಸಿದೆ.

ಕೀಮೋ ಪಾಲ್‌ ಮಾಡಿದ್ದೇನು?

ಭಾರತ ಪರ ಇಶಾನ್ ಕಿಶನ್ 10 ಎಸೆತಗಳಲ್ಲಿ 30 ರನ್ ಗಳಿಸಿದರು. ನಮನ್ ಧೀರ್ 6 ಎಸೆತಗಳಲ್ಲಿ ಅಜೇಯ 24 ರನ್, ಶ್ರೇಯಸ್ ಅಯ್ಯರ್ 22 ಮತ್ತು ಸಂಜು ಸ್ಯಾಮ್ಸನ್ 16 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಕೀಮೊ ಪಾಲ್ 2 ವಿಕೆಟ್, ಶಮರ್ ಸ್ಪ್ರಿಂಗರ್ 2 ವಿಕೆಟ್ ಮತ್ತು ಶಮರ್ ಜೋಸೆಫ್ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗಿ ಕೀಮೋ ಪಾಲ್ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ವಿಕೆಟ್‌ ಪಡೆದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಕೀಮೋ ಪಾಲ್ ಮತ್ತು ಅಭಿಷೇಕ್ ಶರ್ಮಾ ನಡುವೆ ಮೈದಾನದಲ್ಲಿ ತೀವ್ರ ವಾಗ್ವಾದ ನಡೆಯಿತು.

ಕೈ ಕುಲುಕುವಾಗ ವಾಗ್ವಾದ್!

ಪಂದ್ಯದ ನಂತರ, ಅಭಿಷೇಕ್ ಮತ್ತು ಕೀಮೊ ಪಾಲ್ ಕೈಕುಲುಕುವಾಗ ವಾಗ್ವಾದ ನಡೆಸಿದರು. ಎರಡೂ ತಂಡಗಳ ಅಂಪೈರ್ ಮತ್ತು ಆಟಗಾರರು ವಾದ ಶಮನಗೊಳಿಸಬೇಕಾಯಿತು. ಹೈದರಾಬಾದ್‌ನಲ್ಲಿ ಇಬ್ಬರ ನಡುವಿನ ಜಗಳ ಬೆಂಗಳೂರಿನಲ್ಲೂ ಮುಂದುವರೆಯಿತು.

ಅದ್ಭುತ ಕಂಬ್ಯಾಕ್‌ ಮಾಡಿದ ಪಾಲ್!

ಇನ್ನಿಂಗ್ಸ್ ಮೊದಲ ಓವರ್‍‌ ಬೌಲಿಂಗ್ ಮಾಡಲು ಕಿಮೋ ಪಾಲ್‌ ಬಂದಾಗ ಅಭಿಷೇಕ ಶರ್ಮಾ

ಸ್ಟ್ರೈಕ್‌ನಲ್ಲಿದ್ದರು. ಆ ಓವರ್‍‌ನ ನಾಲ್ಕನೇ ಎಸೆತದಲ್ಲಿ ಅಭಿಷೇಕ ಸಿಕ್ಸರ್‍‌ ಬಾರಿಸಿದರು, ಆದರೆ ನಂತರದ ಎಸೆತದಲ್ಲಿ ಕೀಮೋ ಅದ್ಭುತ ಕಂಬ್ಯಾಕ್‌ ಮಾಡಿದರು. ಕೀಮೋ ಮಿಡಲ್‌ ಮತ್ತು ಲೆಗ್‌ ಸ್ಟಂಪ್ಡ್ ಮೇಲೆ ಬ್ಯಾಕ್-ಆಫ್-ಲೆಂಗ್ತ್ ಚೆಂಡನ್ನು ಎಸೆದರು, ಅದನ್ನು ಅಭಿಷೇಕ್ ಫ್ಲಿಕ್ ಮಾಡಲು ಪ್ರಯತ್ನಿಸಿದರು.

ಕುಸಿದ ಶರ್ಮಾ!

ಅಭಿಷೇಕ್ ಶರ್ಮಾ ಅವರ ಶಾಟ್ ಸರಿಯಾಗಿ ಹಿಟ್‌ ಆಗಲಿಲ್ಲ, ಹಾಗಾಗಿಇ ಶಮರ್ ಜೋಸೆಫ್ ಮಿಡ್-ವಿಕೆಟ್‌ನಲ್ಲಿ ಸುಲಭವಾದ ಕ್ಯಾಚ್ ಪಡೆದರು. ಅಭಿಷೇಕ್ ಶರ್ಮಾ ಕೇವಲ 6 ರನ್ ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದರು. ನಾಲ್ಕನೇ ಟಿ20ಐನಲ್ಲಿ, ಕೀಮೊ ಪಾಲ್ ವೆಸ್ಟ್ ಇಂಡೀಸ್ ಗೆಲುವಿನ ರೂವಾರಿ. ಪಾಲ್ 4 ಓವರ್‌ಗಳಲ್ಲಿ 41 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು.