Asianet Suvarna News Asianet Suvarna News

ಪಪುವಾ ತಂಡಕ್ಕೆ ಅಂತರಾಷ್ಟ್ರೀಯ ಏಕದಿನ ಸ್ಥಾನಮಾನ

6 ತಂಡಗಳ ಲೀಗ್ ಟೂರ್ನಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳಿಗೆ ಏಕದಿನ ಸ್ಥಾನಮಾನ ನೀಡಲಾಗುವುದು. ಕೆನಡಾ ಕೂಡ 4 ಅಂಕ ಪಡೆದಿದೆ. ಆದರೆ ನೆಟ್ ರನ್‌ರೇಟ್‌ನಲ್ಲಿ ಕೆನಡಾವನ್ನು ಹಿಂದಿಕ್ಕಿದ ಪಪುವಾ ಅರ್ಹತೆ ಗಿಟ್ಟಿಸಿತು.

Papua New Guinea achieves ODI status
Author
Papua New Guinea, First Published Apr 28, 2019, 1:02 PM IST

ವಿಂದೊಕ್ (ನಮೀಬಿಯಾ): ಪಪುವಾ ನ್ಯೂಗಿನಿ ತಂಡ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಮಾನ್ಯತೆ ಪಡೆದಿದೆ. ಇಲ್ಲಿ ಶನಿವಾರ ಮುಕ್ತಾಯವಾದ ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಕ್ರಿಕೆಟ್ ಟೂರ್ನಿ ಯಲ್ಲಿ ಒಮನ್ ವಿರುದ್ಧ 145 ರನ್‌ಗಳ ಗೆಲುವು ಸಾಧಿಸುವ ಮೂಲಕ ಪಪುವಾ ತಂಡ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದು ಮಾನ್ಯತೆ ಪಡೆದು ಕೊಂಡಿತು. 

ಕ್ರಿಕೆಟ್‌ಗೆ ಎಂಟ್ರಿಕೊಟ್ಟ ದೊಡ್ಡಣ್ಣ-ಅಮೆರಿಕಕ್ಕೆ ಏಕದಿನ ಮಾನ್ಯತೆ!

6 ತಂಡಗಳ ಲೀಗ್ ಟೂರ್ನಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳಿಗೆ ಏಕದಿನ ಸ್ಥಾನಮಾನ ನೀಡಲಾಗುವುದು. ಕೆನಡಾ ಕೂಡ 4 ಅಂಕ ಪಡೆದಿದೆ. ಆದರೆ ನೆಟ್ ರನ್‌ರೇಟ್‌ನಲ್ಲಿ ಕೆನಡಾವನ್ನು ಹಿಂದಿಕ್ಕಿದ ಪಪುವಾ ಅರ್ಹತೆ ಗಿಟ್ಟಿಸಿತು.

ಕೆಲ ದಿನಗಳ ಹಿಂದಷ್ಟೇ ಜಗತ್ತಿನ ದೊಡ್ಡಣ್ಣ ಅಮೆರಿಕ ಕೂಡಾ ಐಸಿಸಿ ಏಕದಿನ ಕ್ರಿಕೆಟ್ ಮಾನ್ಯತೆ ಪಡೆದಿತ್ತು. ವಿಶ್ವ ಕ್ರಿಕೆಟ್ ಲೀಗ್ ಡಿವಿಜನ್-2 ಟೂರ್ನಿಯಲ್ಲಿ ನಮೀಬಿಯಾ ತಂಡವನ್ನು ಮಣಿಸುವ ಮೂಲಕ ಅಮೆರಿಕಾ ಐಸಿಸಿ ಮಾನ್ಯತೆ ಪಡೆದುಕೊಂಡಿದೆ.

Follow Us:
Download App:
  • android
  • ios